ಬಿಜೆಪಿಯವರಿಗೆ ಮಹದೇವಪ್ಪ ಟಾಂಗ್

ಮೈಸೂರು: ಇಲಿ ಹೋಯ್ತು ಸಿಬಿಐ ಹಾಕಿ, ಕೋತಿ ಹೋಯ್ತು ಸಿಬಿಐಗೆ ಕೊಡಿ ಅಂದರೆ ಹೇಗೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಗರಂ ಆಗಿ ನುಡಿದರು.

ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮ ಅಧಿಕಾರಿಗಳು ತನಿಖೆ ಮಾಡುವಲ್ಲಿ ಸಮರ್ಥರಿದ್ದಾರೆ,ಒಳ್ಳೆಯವರದ್ದಕ್ಕೂ, ಕಳ್ಳರದ್ದಕ್ಕೂ ಒಂದೇ ಮಾಡಬೇಡಿ ಎಂದು ಬಿಜೆಪಿಗರಿಗೆ ಟಾಂಗ್ ನೀಡಿದರು.

ಬಿಜೆಪಿ ಅವರು ತಮ್ಮ ಅವಧಿಯಲ್ಲಿ ಅದೆಷ್ಟು ಕೇಸುಗಳನ್ನ ಸಿಬಿಐ ಗೆ ಕೊಟ್ಟಿದ್ದಾರೆ ಹೇಳಲಿ ಎಂದು ಸವಾಲು ಹಾಕಿದರು.

ಮೈಸೂರು ಜಿಲ್ಲೆಯಲ್ಲಿ 496 ಡೆಂಗ್ಯೂ ಪ್ರಕರಣಗಳಿವೆ ಇದರಲ್ಲಿ 14 ಆಕ್ಟಿವ್ ಕೇಸ್ ಗಳಿವೆ,3595 ಮಂದಿಗೆ ಟೆಸ್ಟಿಂಗ್ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು

ಚಾಮುಂಡಿ ಬೆಟ್ಟದಲ್ಲಿ ಮುಂದಿನ ಶುಕ್ರವಾರದಿಂದ ಆಷಾಢ ಪೂಜೆ ಪ್ರಾರಂಭವಾಗಲಿದೆ,ಆದರೆ ಈ ಬಾರಿ
ದೇವಿ ದರ್ಶನಕ್ಕೆ ಯಾವುದೇ ವಿಶೇಷ ಪಾಸ್ ಇರುವುದಿಲ್ಲಾ,ಆಷಾಢ ಶುಕ್ರವಾರ ಖಾಸಗಿ ವಾಹನಗಳಿಗೆ ಚಾಮುಂಡಿ ಬೆಟ್ಟಕ್ಕೆ ಪ್ರವೇಶವಿಲ್ಲ, ಉಚಿತ ಬಸ್ ಮೂಲಕವೇ ಬೆಟ್ಟಕ್ಕೆ ಹೋಗಬೇಕು ಎಂದು ಮಹದೇವಪ್ಪ ಇದೇ ವೇಳೆ ತಿಳಿಸಿದರು.

ಎಸ್ ಇ ಪಿ, ಟಿಎಸ್ ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡ್ತಾ ಇದ್ದೇವೆ ಎಂದು ಬಿಜೆಪಿಯವರು ಗೊಂದಲ ಮಾಡುತ್ತಿದ್ದಾರೆ,ಎಸ್ ಇ ಪಿ, ಟಿಎಸ್ ಪಿ ಕಾಯ್ದೆಯ ಸೆಕ್ಷನ್ ‘ಸಿ’ ಪ್ರಕಾರ ಎಸ್ ಸಿ, ಎಸ್ ಟಿ ಸಮುದಾಯಕ್ಕೆ ಅದೇ ಹಣವನ್ನು ನೀಡಲಾಗುತ್ತಿದೆ,ಕಾಯ್ದೆಯ ಸೆಕ್ಷನ್ ‘ಸಿ’ ಯಲ್ಲಿ ಬೇರೆ ಸಮುದಾಯಕ್ಕೆ ಆ ಹಣವನ್ನು ಬಳಸಲು ಬರುವುದಿಲ್ಲ,ಆದರೆ ವಿನಾ ಕಾರಣ ಬಿಜೆಪಿಗರು ಈ ಬಗ್ಗೆ ಗೊಂದಲ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವರು ದೂರಿದರು.

ಮೂಡಾ ಹಗರಣ ಬಗ್ಗೆ ಮಾಧ್ಯಮದವರು ಗಮನ ಸೆಳೆದಾಗ ಕಾನೂನಾತ್ಮಕವಾಗಿ ಸಿಎಂ ಕುಟುಂಬಕ್ಕೆ ನಿವೇಶನ ಹಂಚಲಾಗಿದೆ, ಪಬ್ಲಿಕ್ ಆಕ್ಯಷನ್ ನಲ್ಲಿ ಜವರ ಎಂಬುವವರು ಜಮೀನು ಖರೀದಿಸಿದ್ದಾರೆ, 1985 ರಲ್ಲಿ 100 ರು ಕೊಟ್ಟು ಜವರಾ ಎಂಬುವವರು ಜಮೀನು ಖರೀದಿಸಿದ್ದಾರೆ ಅಲ್ಲಿಗೆ ಅದು ದಲಿತ ಸಮುದಾಯಕ್ಕೆ ಗ್ಯ್ರಾಂಟ್ ಲ್ಯಾಂಡ್ ಅಲ್ಲಾ,
ಮೂಡಾ ಅನಧಿಕೃತವಾಗಿ ಭೂಮಿ ಸ್ವಾಧೀನ ಮಾಡಿ ಕೊಂಡಿದೆ,ಸಿಎಂ ಕುಟುಂಬದವರು ತಮಗೆ ಇಂತಹ ಕಡೆ ಪರ್ಯಾಯ ನಿವೇಶನ ಕೊಡಿ ಅಂತಾ ಕೇಳಿಲ್ಲ,
ಮೂಡಾ ತಾನು ಮಾಡಿದ ತಪ್ಪಿಗೆ ಪರ್ಯಾಯ ಜಮೀನು ಕೊಟ್ಟಿದೆ ಅಷ್ಟೇ, ಸಿಎಂ ಕುಟುಂಬಕ್ಕೆ ಬಂದಿರುವ ನಿವೇಶನ ಶೇ.100 ನಷ್ಟು ಕಾನೂನಾತ್ಮಕ ಎಂದು ಸಚಿವ ಡಾ.ಎಚ್.ಸಿ. ಮಹಾದೇವಪ್ಪ ಸ್ಪಷ್ಟಪಡಿಸಿದರು.