ಡೊನಾಲ್ಡ್‌ ಟ್ರಂಪ್‌ ಮೇಲೆ ಗುಂಡಿನ ದಾಳಿ

ನ್ಯೂಯಾರ್ಕ್‌: ಪೆನ್ಸಿಲ್ವೇನಿಯಾದಲ್ಲಿ ನಡೆದ ರ‍್ಯಾಲಿ ವೇಳೆ ಭಾಷಣ ಮಾಡುತ್ತಿದ್ದಾಗ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೇಲೆ ಗುಂಡಿನ ದಾಳಿ ನಡೆದಿದ್ದು ಸ್ಥಳದಲ್ಲಿದ್ದ ಜನ ಬೆಚ್ಚಿಬಿದ್ದಿದ್ದಾರೆ.

ದಾಳಿಯಿಂದಾಗಿ ಟ್ರಂಪ್‌ ಪ್ರಾಣಾಪಾಯದಿಂದ ಪಾರಾಗಿದ್ದು,ಅವರ ಕಿವಿಗೆ ಗಾಯವಾಗಿದೆ.

ತಕ್ಷಣ ಅವರನ್ನು ಭದ್ರತಾ ಸಿಬ್ಬಂದಿ ರಕ್ಷಿಸಿ ವೇದಿಕೆಯಿಂದ ಹೊರಗಡೆ ಕರೆದೊಯ್ದರು. ಗುಂಡಿನ ದಾಳಿ ಸಂಭವಿಸಿದಾಗಿನ ದೃಶ್ಯಗಳು ವೀಡಿಯೊದಲ್ಲಿ ಸೆರೆಯಾಗಿದೆ.

ಶೂಟರ್‌ನನ್ನು ಸಿಬ್ಬಂದಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಶೂಟರ್‌ ಜೊತೆಗೆ ಮತ್ತೊಬ್ಬ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.

ಟ್ರಂಪ್ ಮೇಲಿನ ದಾಳಿಯನ್ನು ಯುಎಸ್ ಅಧ್ಯಕ್ಷ ಜೋ ಬೈಡೆನ್ ಖಂಡಿಸಿದ್ದಾರೆ. ಅಮೆರಿಕದಲ್ಲಿ ಈ ರೀತಿಯ ಹಿಂಸಾಚಾರಕ್ಕೆ ಯಾವುದೇ ಜಾಗವಿಲ್ಲ, ಅದನ್ನು ಖಂಡಿಸಲು ನಾವು ಒಂದಾಗಬೇಕು ಟ್ರಂಪ್‌ ಸುರಕ್ಷಿತವಾಗಿದ್ದಾರೆ,ಅವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.