ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಲೋಕಸಭೆ ಚುನಾವಣೆಗೆ ಬಳಸಿಕೊಳ್ಳದೆ ಇದ್ದರೆ ಜಾರಿ ನಿರ್ದೇಶನಾಲಯದ ವಿರುದ್ಧ ದೂರು ನೀಡಿ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶೋಕ್, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರದ ಹಣವನ್ನು ಲೋಕಸಭೆ ಚುನಾವಣೆಗೆ ಬಳಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯವೆ ಪ್ರಕಟಣೆ ಹೊರಡಿಸಿದೆ,ಸಿಎಂ ಸಿದ್ದರಾಮಯ್ಯನವರು ಇದನ್ನು ಒಪ್ಪದಿದ್ದರೆ ಇಡಿ ವಿರುದ್ಧ ದೂರು ದಾಖಲಿಸಬಹುದಿತ್ತಲ್ಲಾ ಎಂದು ಸವಾಲು ಹಾಕಿದರು.
ಸರ್ಕಾರದ ಪ್ರಮುಖರ ಹೆಸರು ಹೇಳುವಂತೆ ಇಡಿ ಅಧಿಕಾರಿಗಳು ಮಾಜಿ ಸಚಿವ ನಾಗೇಂದ್ರ ಅವರ ಮೇಲೆ ಒತ್ತಡ ಹಾಕಿದ್ದಾರೆ ಎಂದು ಸಿದ್ದರಾಮಯ್ಯನವರು ನಿನ್ನೆ ಹೇಳಿದ್ದಾರೆ ಒಬ್ಬ ಮುಖ್ಯ ಮಂತ್ರಿಯಾಗಿ ಹೀಗೆ ಹೇಳಲು ನಾಚಿಕೆ ಆಗಬೇಕು ಎಂದು ಅಶೋಕ್ ವಾಗ್ದಾಳಿ ನಡೆಸಿದರು.
ಈ ಸರ್ಕಾರ ಹಗರಣಗಳ ಸರಮಾಲೆಯನ್ನೇ ನಡೆಸಿದೆ,ತಮ್ಮ ಹುಳುಕು ಮುಚ್ಚಲು ನಮ್ಮ ಮೇಲೆ 20 ಹಗರಣಗಳ ಆರೋಪ ಮಾಡಿದ್ದಾರೆ, ನಾವು ಸಾಕ್ಷಿ ಸಮೇತ 70 ಹಗರಣಗಳನ್ನು ಸಾಕ್ಷಿ ಸಹಿತ ಬಿಡುಗಡೆ ಮಾಡಿದ್ದೇವೆ ಎಂದು ಬುಕ್ ಬಿಡುಗಡೆ ಮಾಡಿದರು.