3‌ ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ

ನವದೆಹಲಿ: ಯಾರೇ ಆಗಲಿ 3 ಲಕ್ಷದವರೆಗಿನ ಆದಾಯ ಹೊಂದುವವರು  ತೆರಿಗೆ ಕಟ್ಟುವಂತಿಲ್ಲ ಎಂದು ವಿತ್ತ‌ಸಚಿವೆ ನಿರ್ಮಾಲಾ ಸೀತಾರಾಮನ್ ಪ್ರಕಟಿಸಿದ್ದಾರೆ.

2024-25 ನೆ ಸಾಲಿನ ಬಜೆಟ್ ನಲ್ಲಿ ತೆರಿಗೆ‌ ಪಾವತಿದಾರರಿಗೆ‌ ಸಚಿವೆ ಗುಡ್ ನ್ಯೂಸು ಕೊಟ್ಟಿದ್ದು,ಹೊಸ ತೆರಿಗೆ ಪದ್ಧತಿಯಲ್ಲಿ  ಸ್ಲ್ಯಾಬ್‌ಗಳು ಈ ರೀತಿ ಇದೆ.

3 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಇರುವುದಿಲ್ಲ,3 ಲಕ್ಷದಿಂದ 7 ಲಕ್ಷದವರೆಗಿನ ಆದಾಯಕ್ಕೆ ಶೇ.5 ತೆರಿಗೆ ವಿಧಿಸಲಾಗುತ್ತದೆ.

7 ಲಕ್ಷದಿಂದ 10 ಲಕ್ಷದವರೆಗಿನ ಆದಾಯಕ್ಕೆ ಶೇ.10 ತೆರಿಗೆ ಇದ್ದರೆ,

10 ಲಕ್ಷದಿಂದ 12 ಲಕ್ಷದವರೆಗಿನ ಆದಾಯಕ್ಕೆ ಶೇ.15 ತೆರಿಗೆ,12 ಲಕ್ಷದಿಂದ 15 ಲಕ್ಷದವರೆಗಿನ ಆದಾಯಕ್ಕೆ ಶೇ.20 ತೆರಿಗೆ ವಿಧಿಸಲಾಗಿದ್ದು,15 ಲಕ್ಷಕ್ಕಿಂತ ಹೆಚ್ಚಿನ ಆದಾಯಕ್ಕೆ ಶೇ .30 ರಷ್ಟು ತೆರಿಗೆ ವಿಧಿಸಲಾಗುವುದು ಎಂದು ಬಜೆಟ್ ನಲ್ಲಿ ಘೋಷಿಸಲಾಗಿದೆ.