ಗಣಪತಿ ಆಶ್ರಮದಲ್ಲಿ ಜನಮನ ಸೂರೆಗೊಂಡ‌ ವಿಶೇಷ‌‌ ಚೇತನ ಮಕ್ಕಳ ನೃತ್ಯ

ಮೈಸೂರು: ಅವಧೂತ ದತ್ತಪೀಠ, ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿಂದು ಎಲ್ಲೆಲ್ಲೂ ಮಕ್ಕಳ ಕಲರವ ಮನೆಮಾಡಿತ್ತು.

ಇವರು‌ ಸಾಮಾನ್ಯ ಮಕ್ಕಳಲ್ಲಾ‌, ವಿಶೇಷ ಚೇತನ ಮಕ್ಕಳು,ಏನೊಂದೂ ಅರಿಯದ ಮುದ್ದು ಮನಸಿನ ಬಾಲ ಕುಸಮಗಳು.

ಅವರ ನಡೆಸಿಕೊಟ್ಟ‌ ನೃತ್ಯಗಳು‌ ಹಾಡು ಮತ್ತು ವಾದ್ಯಕ್ಕೆ ತಕ್ಕಂತೆ ‌ಹಾಕುತ್ತಿದ್ದ ಹೆಜ್ಜೆ ಹಾವ,ಭಾವ ಎಲ್ಲವೂ‌ ಸಾಮಾನ್ಯರನ್ನೂ ಮೀರಿಸುವಂತಿತ್ತು.

ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರ 21ನೇ ಚಾತುರ್ಮಾಸ್ಯ‌ ವ್ರತದೀಕ್ಷೆ ಪ್ರಯುಕ್ತ ಇಂದು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಶೇಷ ಚೇತನ ಮಕ್ಕಳಿಂದ ಮೊದಲು ಅನಘಾ ವ್ರತ ಮಾಡಿಸಲಾಯಿತು.

ಮೇಟಗಳ್ಳಿಯ ರಂಗರಾವ್ ಮೆಮೋರಿಯಲ್ ಶಾಲೆಯ ವಿಶೇಷ ಚೇತನ ಮಕ್ಕಳು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ರಚಿಸಿರುವ ಹಲವು ಭಜನೆಗಳನ್ನು ಹಾಡುವ ಮೂಲಕ‌ ಎಲ್ಲರ ಮನಸೂರೆಗೊಂಡರು.

ಮಾತೃಮಂಡಳಿ ಶಾಲೆ ಮಕ್ಕಳು ಬೆಳ್ಳಿ ಮೂಡಿತೊ… ಕೋಳಿ ಕೂಗಿತೋ ಹಾಡಿಗೆ ನೃತ್ಯ ಮಾಡಿ ಸೈ ಎನಿಸಿಕೊಂಡರು.

ಯೋಗೇಶ್ ಮಾಸ್ಟರ್ ನೃತ್ಯ ನಿರಂತರ ಟ್ರಸ್ಟ್ ಸ್ಥಾಪಿಸಿ ವಿಶೇಷ ಚೇತನ ಮಕ್ಕಳಿಗೆ ಉಚಿತವಾಗಿ ನೃತ್ಯ ತರಬೇತಿ ನೀಡುತ್ತಿದ್ದು ಅವರ ಶಾಲೆಯ ಮಕ್ಕಳು ಮಾಡಿದ ಶಿವ ತಾಂಡವ ನೃತ್ಯ ರೂಪಕ ಅದ್ಭುತವಾಗಿತ್ತು.

ಆಖಿಲ ಭಾರತ ವಾಕ್ ಮತ್ತು ‌ಶ್ರವಣ ಸಂಸ್ಥೆಯ ಚಿರಂತನ್ ಎಂಬ ಬಾಲಕ ಭಗವದ್ಗೀತೆ ಶ್ಲೋಕ ಹಾಗೂ ಕ್ಯಾಸಿನೊ ನುಡಿಸಿ ಮನಸೆಳೆದನು

ಪುಟ್ಟವೀರಮ್ಮ‌ ಶ್ರವಣ ದೋಷವುಳ್ಳ ಹೆಣ್ಣು‌ ಮಕ್ಕಳ ಶಾಲೆ ಮಕ್ಕಳು ಕಟೀಲು ದುರ್ಗಾಪರಮೇಶ್ವರಿ ನೃತ್ಯ ರೂಪಕ ಮಾಡಿ ಎಲ್ಲರ ಮನ ಸೂರೆಗೊಂಡರು.

ಮೈಸೂರು ರಾಜ ಒಡೆಯರ್ ಅವರಿಂದ ಸ್ಥಾಪಿತವಾದ ಉಚಿತ ವಸತಿ ಶಾಲೆ ಮಕ್ಕಳು ಶಿವ – ನಂದಿಯ ನೃತ್ಯ ಮಾಡಿ ಮನಗೆದ್ದರು.

ಶ್ರೀ ಸಾಯಿ ಸಂಸ್ಥೆಯ ಮಕ್ಕಳು ವಾಲಿ- ಹನುಮನ ನೃತ್ಯ ಮಾಡಿ ಎಲ್ಲರ ಮನಸೂರೆಗೊಂಡರು.

ಎಸ್ ಜಿಎಸ್ ಶಾಲೆ ಮಕ್ಕಳು ಯಮುನಾ ತಟಕ ರಾಧಾ ಕೃಷ್ಣ ನೃತ್ಯ ಮಾಡಿ ಎಲ್ಲರಿಂದ ಸೈ ಎನಿಸಿಕೊಂಡರು.

ಕೆ.ಚಿದಾನಂದ ಎಂಬ ಬಾಲಕ ಸನ್ನೆ ಭಾಷೆಯ ಮೂಲಕ ಅನಘಾ‌ ವ್ರತ ಕಥೆಯನ್ನು ಮನಮುಟ್ಟುವಂತೆ ಹೇಳಿದ್ದು ಎಲ್ಲರನ್ನೂ ಮಂತ್ರಮುಗ್ದವಾಗಿಸಿತು.

ಇದೇ‌ ವೇಳೆ‌ ಮಂಜುಳಾ ಎಂಬ‌‌ ವಿಶೇಷ ಚೇತನರು ತಮಗೆ‌ ದೇವರೆಂದರೆ‌ ನಂಬಿಕೆಯೇ‌ ಇರಲಿಲ್ಲಾ ಗಣಪತಿ‌ ಸಚ್ಚಿದಾನಂದ ಆಶ್ರಮಕ್ಕೆ ಬಂದ ನಂತರ ನನಗೆ ಮನಸ್ಸು ‌ಬಹಳ ಪರಿವರ್ತನೆ ‌ಆಯಿತು ಎಂದು ‌ಅನುಭವ ಹೇಳಿಕೊಂಡರು.

ಆಶ್ರಮದ‌ ಸ್ವಯಂಸೇವಕರಾದ ಸತೀಶ್ ಪುಷ್ಪಲತಾ‌ ಅವರ ಪುತ್ರಿ ದೃಷ್ಟಿ ವಿಕಲಚೇತನೆ ಅನಘಾ ಕನ್ನಡ‌ ಎಂ ಎ ಮಾಡಿ ಗೋಲ್ಡ್ ಮೆಡಲ್ ಪಡೆದಿದ್ದಾರೆ.ಈಗ ಪಿ ಹೆಚ್ ಡಿ ಮಾಡುತ್ತಿದ್ದು ಅವಧೂತ‌ ದತ್ತಪೀಠದ‌ ಶ್ರೀ ‌ದತ್ತ ವಿಜಯಾನಂದ ತೀರ್ಥ‌‌ ಸ್ವಾಮೀಜಿ ಅವರು ಆಕೆಯ ಪ್ರತಿಭೆಯನ್ನು ಕೊಂಡಾಡಿದರು.ಇದೇ‌ ವೇಳೆ‌ ಚನ್ನೈನ ಡಾ.ಶಿವ ಎಂಬವರು ವಿಶೇಷವಾಗಿ ಸಿದ್ದಪಡಿಸಿದ ಕನ್ನಡಕವನನ್ನು ಆಕೆಗೆ ವಿತರಿಸಲಾಯಿತು.

ಬೃಂಗೇಶ್‌ ಎಂಬ ಯುವಕ ಟ್ರೈನ್‌ ಆಕ್ಸಿಡೆಂಟ್  ನಲ್ಲಿ‌ ಎರಡೂ‌ ಕೈಗಳು ಮತ್ತು ಒಂದು ಕಾಲು ಕಳೆದು ಕೊಂಡಿದ್ದು ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಿಂದ ನಡೆಯುವಂತಾಗಿದ್ದೇನೆ ಎಂದು ತಮ್ಮ ಅನುಭವ ಹೇಳಿಕೊಂಡರು.

ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ವೀಕ್ಷಿಸಿದ ಶ್ರೀ ‌ದತ್ತ‌ ವಿಜಯಾನಂದ ತೀರ್ಥ ಸ್ವಾಮೀಜಿ ಅವರು ಮಕ್ಕಳ‌ ಪ್ರತಿಭೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.

ಆಶೀರ್ವಚನ ನೀಡಿದ ಶ್ರೀಗಳು,ವಿಶೇಷ ಚೇತನ ಮಕ್ಕಳೆಲ್ಲರೂ ಬಹಳ ಚೇತನ ವುಳ್ಳವರು. ಅವರಲ್ಲಿರುವ‌ ಚೇತನ ಸಾಮಾನ್ಯ ಜನರಲ್ಲೂ ಇಲ್ಲಾ ಅನ್ನಿಸುತ್ತಿದೆ ಎಂದು ‌ಹೃದಯ‌ ತುಂಬಿ ಹೇಳಿದರು.

ಈ ಮಕ್ಕಳಿಂದ ಅನಘಾಷ್ಟಮಿ ವ್ರತ‌ ಮಾಡಿಸಿದ್ದು ಸಂತೋಷ ಉಂಟುಮಾಡಿದೆ,ಈ‌ ಮಕ್ಕಳ ಜೀವನ ಸುಗಮವಾಗಿರಲಿ,ಎಲ್ಲರಿಗೂ ಒಳ್ಳೆಯದಾಗಲಿ,ಭಗವಂತನ ಆಶೀರ್ವಾದ, ಗುರು ಕೃಪೆ ನಿಮ್ಮೆಲ್ಲರ ಮೇಲಿರಲಿ ಮಕ್ಕಳಿಗೆ ಶ್ರೀಗಳು ಹಾರೈಸಿದರು.

ಕಾರ್ಯಕ್ರಮ ನಡೆಸಿಕೊಟ್ಟ‌ ಎಲ್ಲ ಶಾಲೆಯ ಮಕ್ಕಳಿಗೆ ಪ್ರಸಾದ ರೂಪದಲ್ಲಿ ಬ್ಯಾಗ್‌‌ ಮತ್ತಿತರ ಪರಿಕರ ಗಳನ್ನು ಶ್ರೀಗಳು ವಿತರಿಸಿ ಶುಭ ಕೋರಿದರು.

ಸುಮಾರು ಹತ್ತು‌ ಶಾಲೆಯ 800 ಕ್ಕೂ ಹೆಚ್ಚು ಮಕ್ಕಳಿಗೆ ಶಾಲಾ ಬ್ಯಾಗ್ ಮತ್ತಿತರ ವಸ್ತುಗಳನ್ನು ಅವಧೂತ ದತ್ತಪೀಠದ‌ ವತಿಯಿಂದ ವಿತರಿಸಲಾಯಿತು.

ಅವಧೂತ‌ ದತ್ತಪೀಠ ಹಾಗೂ ತೆಲಾಂಗಣ ಬಾನೂರಿನಲ್ಲಿರುವ ಅನಘದತ್ತ ಕೇಂದ್ರದ ಸಹಯೋಗದಲ್ಲಿ ಮಂಜುಳ ಹಾಗೂ ಟ್ರಸ್ಟಿ ಕಾಮೇಶ್ವರ್ ಅವರು ಎಲ್ಲಾ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಿದ್ದು ವಿಶೇಷ.