ಸಿದ್ದು‌ ಬಂದರೆ‌ ಮಳೆ‌ ಬರಲ್ಲಾ ಅಂದೋರಿಗೆ ಡಿಕೆಶಿ‌ ಟಾಂಗ್

ಮೈಸೂರು:ಸಿದ್ದರಾಮಯ್ಯ ಕಾಲ್ಗುಣ ಸರಿ ಇಲ್ಲ ಅನ್ನುತ್ತಿದ್ದರು,ಅವರು ಬಂದರೇ ಮಳೆ ಬರಲ್ಲ ಎನ್ನುತ್ತಿದ್ದರು ಈಗ ಏನಾಗಿದೆ ನೋಡಿ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಪಕ್ಷಗಳಿಗೆ ಟಾಂಗ್ ನೀಡಿದರು.

ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿಕೆಶಿ, ಎಲ್ಲಾ ಜಲಾಶಯಗಳು ಭರ್ತಿಯಾಗಿದೆ, ತಮಿಳುನಾಡಿಗೆ ಅಗತ್ಯಗಿಂತಲೂ ಹೆಚ್ಚು ನೀರು ಹೋಗಿದೆ,ತಮಿಳುನಾಡು, ಕರ್ನಾಟಕದವರು ಇಬ್ಬರು ಸಂತೋಷವಾಗಿದ್ದಾರೆ ಇದು ನೆಮ್ಮದಿ ವಿಷಯ ಎಂದು ಹೇಳಿದರು.ರಾಜ್ಯದ ಕೆರೆ ಕಟ್ಟೆ ತುಂಬಿವೆ,ಹಾಗಾಗಿ ಇಂದು ಭಾಗಿನ ಅರ್ಪಣೆ ಮಾಡುತ್ತಿದ್ದೇವೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.