ಬೆಂಗಳೂರು: ನನಗೆ ಗುಟ್ಕಾ, ಸಿಗರೇಟ್, ಮದ್ಯ ಸೇವಿಸುವ ಅಭ್ಯಾಸವಿದೆ. ಬೇರೆ ಅಭ್ಯಾಸಗಳಿಲ್ಲಿ ಎಂದು ನಟ ಯೋಗಿ ಹೇಳಿದ್ದಾರೆ.
ನಗರದ ಕೋಣನಕುಂಟೆಯ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಯೋಗಿ ಮಾತನಾಡಿದರು.
ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ನನ್ನ ಮೊಬೈಲ್ ವಶಕ್ಕೆ ಪಡೆದಿಲ್ಲ ಎಂದವರು ತಿಳಿಸಿದರು.
ನಟಿ ರಾಗಿಣಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದ ಅವರು ಈ ಬಗ್ಗೆ ಅಧಿಕಾರಿಗಳು ನನ್ನನ್ನು ಪ್ರಶ್ನಿಸಿಲ್ಲ ಎಂದರು.
ರಾಗಿಣಿ ಜತೆಗಿನ ಚಿತ್ರವೊಂದರಲ್ಲಿ ಅಭಿನಯಿಸಿದ ನಂತರ ನನಗೂ ಆಕೆಗೂ ಯಾವುದೇ ಸಂಬಂಧವಿಲ್ಲ. ದೂರವಾಣಿ ಮೂಲಕವೂ ರಾಗಿಣಿ ಅವರನ್ನು ಸಂಪರ್ಕಿಸಿಲ್ಲ ಎಂದರು.
ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ, ಮತ್ತೆ ಕರೆದರೆ ಬರಬೇಕೆಂದು ಹೇಳಿದ್ದಾರೆಂದು ಯೋಗಿ ಹೇಳಿದರು.