ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆ ಮಂಡನೆಗೆ ಸಿದ್ದು ಅಸಮಾಧಾನ

ಬೆಂಗಳೂರು: ಬಿಜೆಪಿ- ಎನ್‌ಡಿಎ ಸರ್ಕಾರ ಸಂಪೂರ್ಣವಾಗಿ ಅಲ್ಪಸಂಖ್ಯಾತ ವಿರೋಧಿಗಳು ಅವರಿಗೆ ಸಾಮಾಜಿಕ ನ್ಯಾಯ ಗೊತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮಾಜಿ ಮುಖ್ಯ ಮಂತ್ರಿ ಎಸ್‌. ನಿಜಲಿಂಗಪ್ಪ ಅವರ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ವಿಧಾನಸೌಧ ಆವರಣದಲ್ಲಿರುವ ನಿಜಲಿಂಗಪ್ಪ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ, ನಂತರ ಸಿಎಂ ಮಾಧ್ಯಮಗಳೊಂದಿಗೆ ಮಾತನಾಡಿದರು.

ಸಂಸತ್‌ನಲ್ಲಿ ಕೇಂದ್ರ ಸರ್ಕಾರ ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆ ಮಂಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದು, ಎನ್‌ಡಿಎ ಸರ್ಕಾರ ಜಾತ್ಯಾತೀತ ಸರ್ಕಾರ ಅಲ್ಲ, ಅವರಿಗೆ ಸಾಮಾಜಿಕ ನ್ಯಾಯ ಗೊತ್ತಿಲ್ಲ, ಎನ್‌ಡಿಎ ಕೂಟ ಕಮ್ಯುನಲ್ ಪಾರ್ಟಿಗಳು, ಫ್ಯಾಸಿಸ್ಟ್ ಮನಸ್ಥಿತಿ ಇರೋರು ಎಂದು ಕಿಡಿ ಕಾರಿದರು.

ಆ.9ರಂದು ಮೈಸೂರಿನಲ್ಲಿ ಜನಾಂದೋಲನ ಸಮಾವೇಶ ನಡೆಯಲಿದೆ. ಅಲ್ಲಿ ಎಲ್ಲ ಮಾತಾಡ್ತೀನಿ ಎಂದು ‌ಸಿದ್ದು ಹೇಳಿದರು.

ಬಿ.ಕೆ ಹರಿಪ್ರಸಾದ್‌ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ಹರಿಪ್ರಸಾದ್ ನಮ್ಮ ಪಕ್ಷದ ನಾಯಕರು. ಅವರು ನನ್ನ ಭೇಟಿಯಾಗೋದರಲ್ಲಿ ಯಾವುದೇ ವಿಶೇಷ ಇಲ್ಲ ಎಂದು ತಿಳಿಸಿದರು.

1 ಗಂಟೆಗಳ ಕಾಲ ಇದ್ದರು, ತುಂಬಾ ದಿನಗಳಿಂದ ಅವರು ಭೇಟಿಯಾಗಿರಲಿಲ್ಲ, ಹಾಗಾಗಿ ಭೇಟಿಯಾಗಿ ಮಾತಾಡಿದ್ದಾರೆ, ಉಭಯ ಕುಶಲೋಪರಿ ಅಷ್ಟೆ,ಬೇರೇನಿಲ್ಲಾ ಎಂದು ಸಿದ್ದರಾಮಯ್ಯ ತಿಳಿಸಿದರು.