ಬಾಲ ರಾಮನ ಮೂರ್ತಿ ಕೆತ್ತಿದ ಅರುಣ್‌ ಯೋಗಿರಾಜ್‌ಗೆ ಅಮೆರಿಕ ವೀಸಾ ನಿರಾಕರಣೆ

ಮೈಸೂರು: ಅಯೋಧ್ಯೆಯಲ್ಲಿ ಬಾಲ ರಾಮನ ಮೂರ್ತಿಯನ್ನು ಕೆತ್ತಿದ್ದ ಶಿಲ್ಪಿ ಅರುಣ್‌ ಯೋಗಿರಾಜ್‌ ಅವರಿಗೆ ಅಮೆರಿಕ  ವೀಸಾ ನೀಡಲು ನಿರಾಕರಿಸಿದೆ.

ಅಮೇರಿಕದಲ್ಲಿರುವ ಕನ್ನಡಿಗರು ನಡೆಸುವ 12ನೇ ವಿಶ್ವ ಅಕ್ಕ ಸಮ್ಮೇಳನದ ಮುಖ್ಯ ಅತಿಥಿಯಾಗಿ ಅರುಣ್‌ ಯೋಗಿರಾಜ್‌ ಅಮೆರಿಕಕ್ಕೆ ತೆರಳಬೇಕಿತ್ತು.

ಅದಕ್ಕಾಗಿ ಅವರು ವೀಸಾ ಪಡೆಯಲು ಅರ್ಜಿ ಹಾಕಿದ್ದರು,ಆದರೆ ಅವರಿಗೆ ಅಮೆರಿಕ ವೀಸಾ ನೀಡಲು ನಿರಾಕರಿಸಿದೆ.

ಅರುಣ್ ಯೋಗಿರಾಜ್ ಅವರ ಪತ್ನಿ ವಿಜೇತಾ ಅಮೆರಿಕಕ್ಕೆ ತೆರಳಿದ್ದಾರೆ,ಆದರೆ ಯಾವ ಕಾರಣಕ್ಕೆ ಅರುಣ್‌ ಯೋಗಿರಾಜ್‌ ಅವರಿಗೆ  ಅಮೆರಿಕ ವೀಸಾ ನಿರಾಕರಣೆ ಮಾಡಿದೆ ಎಂಬುದು ಗೊತ್ತಾಗಿಲ್ಲ.