ಮಹಾದಾಯಿ ಜಲವಿವಾದ: ವರದಿ ನೀಡುವ ಅವಧಿ ವಿಸ್ತರಿಸಿದ ಸಚಿವಾಲಯ

ನವದೆಹಲಿ: ಮಹಾದಾಯಿ ಜಲವಿವಾದ ಕುರಿತು ಇನ್ನಷ್ಟು ವರದಿ ಸಲ್ಲಿಸಬೇಕಾಗಿರುವುದರಿಂದ ಮಹಾದಾಯಿ ನ್ಯಾಯಮಂಡಳಿಗೆ 6 ತಿಂಗಳವರೆಗೆ ಅವಧಿಯನ್ನು ವಿಸ್ತರಿಸಿ ಅಧಿಸೂಚನೆ ಹೊರಡಿಸಲಾಗಿದೆ.

ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳ ನಡುವಿನ ಮಹದಾಯಿ ನೀರು ಹಂಚಿಕೆ ವಿವಾದ ಕುರಿತು ಪರಿಹಾರ ಕಂಡುಕೊಳ್ಳಲು ಮಹದಾಯಿ ನ್ಯಾಯಮಂಡಳಿಯನ್ನು ಸ್ಥಾಪಿಸಲಾಗಿದೆ.

ಆದರೆ ಈ ಮಂಡಳಿಯು ಇನ್ನೂ ಹೆಚ್ಚಿನ ವರದಿಯನ್ನು ನೀಡುವ ಕುರಿತು ಕಾಲಾವಕಾಶ ಕೋರಿ ಜಲಶಕ್ತಿ ಸಚಿವಾಲಯಕ್ಕೆ ಮನವಿ ಸಲ್ಲಿಸಿತ್ತು.

ಹಾಗಾಗಿ ನಿನ್ನೆಯೇ ಸಚಿವಾಲಯವು ಅವಧಿಯನ್ನು ವಿಸ್ತರಿಸಿ ಅಧಿಸೂಚನೆ ಹೊರಡಿಸಿದೆ,ಈ ಅವಧಿಯು ಆ.20ರಿಂದಲೇ ಅನ್ವಯವಾಗಲಿದೆ.