ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಮತ್ತಿತರರಿಗೆ ರಾಜಾತಿಥ್ಯ ನೀಡಿದ ಪ್ರಕರಣವನ್ನು ಸಿಎಂ ಸಿದ್ದರಾಮಯ್ಯ ಗಂಭೀರವಾಗಿ ಪರಿಗಣಿಸಿದ್ದು ಕೂಡಲೇ ದರ್ಶನ್ ನನ್ನು ಬೇರೆ ಜೈಲಿಗೆ ಕಳಿಸುವಂತೆ ಸೂಚಿಸಿದ್ದಾರೆ.
ದರ್ಶನ್ ಗೆ ರಾಜಾತೀತ್ಯ ನೀಡಿದ ಜೈಲಿನ ಅಧಿಕಾರಿಗಳನ್ನೂ ಕೂಡಾ ತಕ್ಷಣ ಅಮಾನತು ಮಾಡಬೇಕೆಂದು ಸಿದ್ದು ತಾಕೀತು ಮಾಡಿದ್ದಾರೆ.
ಜತೆಗೆ ದರ್ಶನ್ ಮತ್ತು ಇತರರನ್ನು ಕೂಡಲೇ ಬೇರೆ ಬೇರೆ ಕಾರಾಗೃಹಗಳಿಗೆ ಸ್ಥಳಾಂತರ ಮಾಡುವಂತೆಯೂ ತಾಕೀತು ಮಾಡಿದ್ದಾರೆ.
ಕಾರಾಗೃಹಕ್ಕೆ ಕೂಡಲೇ ಭೇಟಿ ನೀಡಿ ಪ್ರಕರಣದ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಸಿದ್ದರಾಮಯ್ಯ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಆದೇಶಿಸಿದ್ದಾರೆ.