ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲು ಕೋರ್ಟ್ ಅನುಮತಿ ನೀಡಿದೆ.
ನಟ ದರ್ಶನ್ ಸೇರಿದಂತೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಲವು ಆರೋಪಿಗಳನ್ನು ಕೂಡಾ ಬೇರೆ ಬೇರೇ ಜೈಲಿಗೆ ಸ್ಥಳಾಂತರಿಸುವಂತೆ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಾಯ ಆದೇಶಿಸಿದೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಟ ದರ್ಶನ್ ಗೆ ರಾಜಾತಿಥ್ಯ ಫೋಟೋ ವೈರಲ್ ಆದ ಬೆನ್ನಲ್ಲೇ ಸಂಕಷ್ಟ ಎದುರಾಗಿದೆ.
ಕೋರ್ಟ್ ಆದೇಶದ ಮೇರೆಗೆ ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗುತ್ತದೆ. ನ್ಯಾಯಾಲಯದ ಆದೇಶದ ಪ್ರತಿ ತಲುಪಿದ್ದು ಜೈಲು ಸಿಬ್ಬಂದಿ ದರ್ಶನ್ ರನ್ನು ಬಳ್ಳಾರಿಗೆ ಸ್ಥಳಾಂತರಿಸಲು ಸಿದ್ದತೆ ನಡೆಸಿದ್ದಾರೆ.
ಉಳಿದ ಆರೋಪಿಗಳಲ್ಲಿ ಕೆಲವರನ್ನು ಧಾರಾವಾಡ, ವಿಜಯಪುರ,ಮೈಸೂರು, ಕಲಬುರಗಿ,ಶಿವಮೊಗ್ಗ ಜೈಲುಗಳಿಗೆ ಕಳುಹಿಸಲಾಗುತ್ತದೆ.
ದರ್ಶನ್ ಬಳ್ಳಾರಿ ಸ್ಥಳಾಂತರದ ವಿಷಯ ಗೊತ್ತಾಗುತ್ತಿದ್ದಂತೆ ಅತ್ತ ಬಳ್ಳಾರಿ ಜೈಲಿನ ಸುತ್ತ ಟೈಟ್ ಸೆಕ್ಯುರಿಟಿ ಮಾಡಲಾಗಿದೆ.ಅಲ್ಲದೆ
ವಿಐಪಿ ಸೆಲ್ ನ ಸಿಸಿ ಟಿವಿಗಳನ್ನು ಜೈಲು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.