ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಭಾರತೀಯ ಭದ್ರತಾ ಪಡೆಗಳು 2 ಪ್ರತ್ಯೇಕ ಎನ್‌ಕೌಂಟರ್ ನಡೆಸಿ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿದೆ.
ನಿನ್ನೆ ಮಧ್ಯರಾತ್ರಿ ಜಿಲ್ಲೆಯಲ್ಲಿ 2 ಪ್ರತ್ಯೇಕ ಎನ್‌ಕೌಂಟರ್ ನಡೆಸಿದ ಭದ್ರತಾ ಪಡೆಗಳು, ಕುಶಾಲ್ ಪೋಸ್ಟ್ ನ ಕರ್ನಾಹನಲ್ಲಿ ಇಬ್ಬರು ಮತ್ತು ಗುಲಾಬ್ ಪೊಸ್ಟ್‌ನ ಕುಮಕಾರಿನ ಪಕ್ಕದಲ್ಲಿ ಒಬ್ಬ ಭಯೋತ್ಪಾಕನನ್ನು ಹತ್ಯೆ ಮಾಡಿದೆ.
ಆದರೆ ಭಾರೀ ಮಳೆಯಿಂದಾಗಿ ಭಯೋತ್ಪಾದಕರ ಮೃತದೇಹಗಳನ್ನು ವಶಪಡಿಸಲು ಭದ್ರತಾ ಪಡೆಗೆ ಆಗಲಿಲ್ಲ ಎಂದು ವರದಿ ತಿಳಿಸಿದೆ.
ಭಾರತೀಯ ಸೈನ್ಯವು ಒಳನುಸುಳಕೋರರ ವಿರುದ್ಧ ಹದ್ದಿನ ಕಣ್ಣಿಟ್ಟಿದ್ದು, ಗುಪ್ತಚರ ಇಲಾಖೆಯ ಖಚಿತ ಮಾಹಿತಿ ಮೆರೆಗೆ ಎನ್‌ಕೌಂಟರ್ ನಡೆಸಿದೆ.