ಮೈಸೂರು: ಸರಸ್ವತಿಪುರಂನ ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ಬಜಾಜ್ ಶೋರೂಮ್ ನಲ್ಲಿ ವಿಶ್ವದ ಮೊಟ್ಟ ಮೊದಲ ಬಜಾಜ್ ಸಿ ಎನ್ ಜಿ ಫ್ರೀಡಂ 125 ದ್ವಿಚಕ್ರ ವಾಹನ ಬಿಡುಗಡೆ ಮಾಡಲಾಯಿತು.
ಚಿತ್ರ ನಟ ಶಂಕರ್ ಅಶ್ವಥ್ ಹಾಗೂ ಕೆಎಂಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್ ಅವರು ದೀಪ ಬೆಳಗಿಸಿ ನಂತರ ಮೊದಲ 20 ಗ್ರಾಹಕರಿಗೆ ಬೈಕ್‌ನ ಕೀಗಳನ್ನು ಹಸ್ತಾಂತರಿಸಿದರು.
ಈ ವೇಳೆ ನಟ ಶಂಕರ್ ಅಶ್ವಥ್ ಅವರು ಗ್ರಾಹಕರಿಗೆ ಶುಭಕೋರಿ ಮಾತನಾಡಿ,
ಪ್ರಪಂಚದಲ್ಲೇ ಇತಿಹಾಸ ಸೃಷ್ಟಿಸಿದ ಬಜಾಜ್ ಸಂಸ್ಥೆ ಇದೀಗ ವಿಶ್ವದಲ್ಲೇ ಮೊದಲ ಸಿಎನ್‌ಜಿ ಬೈಕ್ ಲೋಕಾರ್ಪಣೆ ಮಾಡುವ ಮೂಲಕ ಗ್ರಾಹಕರ ಸ್ನೇಹಿಯಾಗಿ ಗುರುತಿಸಿಕೊಂಡಿದೆ ಎಂದು ಶ್ಲಾಘಿಸಿದರು.
ಪೆಟ್ರೋಲ್ ಮತ್ತು ಸಿಎನ್‌ಜಿ ಒಳಗೊಂಡಿರುವುದ ರಿಂದ ಬಹಳ ವೈಶಿಷ್ಟ್ಯವಾಗಿದೆ. ಮೈಸೂರಿನ ಪಾಪ್ಯುಲರ್ ಬಜಾಜ್ ಸಂಸ್ಥೆ ಕಳೆದ 14 ವರ್ಷ ಕ್ಕಿಂತಲೂ ಹೆಚ್ಚು ಸಮಯದಿಂದ ಒಳ್ಳೆಯ ಸೇವೆ ನೀಡುತ್ತಿದೆ.
ಪಾಪ್ಯುಲರ್ ಬಜಾಜ್ ಗೆ ಉತ್ತಮ ನಾಯಕತ್ವ ಸಿಕ್ಕಿರುವುದರಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಸಶಕ್ತವಾಗುವುದರ ಜತೆಗೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಈಗಾಗಲೇ ಮೈಸೂರು ಮಾತ್ರ ವಲ್ಲದೇ ಹಲವು ಕಡೆ ಸೇವೆ ನೀಡುತ್ತಿದ್ದು, ರಾಜ್ಯದ ಎಲ್ಲ ಭಾಗಕ್ಕೂ ವಿಸ್ತರಿಸಿ ಉನ್ನತ ಮಟ್ಟಕ್ಕೆ ಬೆಳೆಯುವಂತಾಗಲಿ ಎಂದು ಹಾರೈಸಿದರು.
ಶೋರೂಮ್ ವ್ಯವಸ್ಥಾಪಕ ನವೀನ್ ಮಾತನಾಡಿ,ಬಜಾಜ್ ಸಂಸ್ಥೆಯು
ವಿಭಿನ್ನ ದೃಷ್ಟಿಯಿಂದಾಗಿ ಸಾರ್ವಜನಿಕರ ಪ್ರೀತಿಗೆ ಪಾತ್ರವಾಗಿದೆ, ಕಠಿಣ ಪರಿಶ್ರಮ, ವೈಜ್ಞಾನಿಕ ಚಿಂತನೆ, ಸೇವಾ ಮನೋಭಾವದ ಕಾರಣಕ್ಕೆ ಶ್ರೇಯಸ್ಸು ಪಡೆದಿದೆ ಎಂದು ತಿಳಿಸಿದರು.
ಗ್ರಾಹಕರ ತೃಪ್ತಿಯೇ ನಮ್ಮ ಸಂಸ್ಥೆಯ ಸಂಪತ್ತು, ನಮ್ಮ ಪಾಪ್ಯುಲರ್ ಬಜಾಜ್ ಸಂಸ್ಥೆಯು 14 ವರ್ಷಗಳಿಂದಲೂ ಮೈಸೂರಿನಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕ ಸೇವೆ ನೀಡುತ್ತಿದೆ. ಸಂಸ್ಥೆ ಬೆಳೆಯುವಲ್ಲಿ ಗ್ರಾಹಕರ ಪಾತ್ರ ಬಹಳ ಪ್ರಾಮುಖ್ಯವಾಗಿದ್ದು, ನಮ್ಮ ಗ್ರಾಹಕರು ಸದಾ ನಮಗೆ ಪ್ರೋತ್ಸಾಹ, ಸಲಹೆ ನೀಡಿದ್ದಾರೆ ಅವರಿಗೆ ಅಭಾರಿಯಾಗಿ ದ್ದೇವೆ ಎಂದು ಕೃತಜ್ಞತೆ ಸಲ್ಲಿಸಿದರು.
ಪೆಟ್ರೋಲ್ ಮತ್ತು ಸಿಎನ್‌ಜಿ ಸೇರಿ ಒಟ್ಟು 320ಕ್ಕೂ ಅಧಿಕ ಮೈಲೇಜ್ ಸಿಗಲಿದೆ ಎಂದು ಹೇಳಿದರು.
ಶೋರೂಮ್ ನ ಜನರಲ್ ಮ್ಯಾನೇಜರ್ ಗಿರೀಶ್ ಕುಮಾರ್ ನೂತನ ವಾಹನದ ವೈಶಿಷ್ಟ್ಯಗಳನ್ನು ವಿವರಿಸಿದರು
ಈ ದ್ವಿಚಕ್ರ ವಾಹನವು 3 ವರ್ಗಗಳಲ್ಲಿ ಲಭ್ಯವಿರುತ್ತದೆ 125 ಎಲ್ಇಡಿ ಡಿಸ್ಕ್ 125 ಎಲ್ಇಡಿ ಡ್ರಮ್ ಮತ್ತು 125 ಡ್ರಮ್ ಬ್ರೇಕ್, 2 ಕೆ.ಜಿ ಸಿ ಎನ್ ಜಿ ಪ್ಲಸ್ ಎರಡು ಲೀಟರ್ ಪೆಟ್ರೋಲ್ ಒಟ್ಟು ಶ್ರೇಣಿ 330 km.
ಪ್ರತಿ ದಿನದ ಟ್ರಾವೆಲ್ ಶೇ 50 ಉಳಿತಾಯ ಮಾಡಬಹುದು.
ಈ ದ್ವಿಚಕ್ರ ವಾಹನದ ಸಿ ಎನ್ ಜಿ ಸಿಲಿಂಡರನ್ನು ಪಿ ಇ ಎಸ್ ಒ ಅನುಮೋದಿಸಿದೆ. ಜತೆಗೆ ಬ್ಲೂಟೂತ್ ಲಭ್ಯವಿದೆ. ಮೊಬೈಲ್ ಯು ಎಸ್ ಪಿ ಕನೆಕ್ಟರ್ ಲಭ್ಯವಿದೆ. ದ್ವಿಚಕ್ರವಾಹನವು ಎಲ್ಲಾ ರೀತಿಯ ಅವಘಡ ಗಳನ್ನು ನಿಭಾಯಿಸುವ ಶಕ್ತಿಯನ್ನು ಹೊಂದಿದೆ,ಮತ್ತು ವಾಯು ಮಾಲಿನ್ಯವನ್ನು ನಿಯಂತ್ರಣದಲ್ಲಿರುತ್ತದೆ ಎಂದು ತಿಳಿಸಿದರು.
ಈ ವೇಳೆ ಸರ್ವಿಸ್ ಮ್ಯಾನೇಜರ್ ಜೋಸೆಫ್ ಹಾಗೂ ಶೋರೂಮ್ ಸಿಬ್ಬಂದಿ ಹಾಜರಿದ್ದರು.