ಮೈಸೂರು: ನಗರದ ವಲಯ 3ರ ವ್ಯಾಪ್ತಿಯ ವಾರ್ಡ್ ನಂಬರ್ 47ರಲ್ಲಿ ಮನೆಗಳಿಗೆ ತೆರಳಿ ಸಾರ್ವಜನಿಕರ ಸಮಸ್ಯೆಗಳನ್ನು ಶಾಸಕ ಟಿ.ಎಸ್. ಶ್ರೀವತ್ಸ ಆಲಿಸಿದರು.
ಮುಂಜಾನೆ 7.30 ಕ್ಕೆ ಕುವೆಂಪು ಶಾಲೆಯಿಂದ ಪಾದಯಾತ್ರೆ ಪ್ರಾರಂಭ ಮಾಡಿದ ಶಾಸಕರು ಸರಸ್ವತಿಪುರಂ 15,14,13,12 ನೆ ಕ್ರಾಸ್ ಭಾಗದ ಎಲ್ಲಾ ಮನೆ ಮನೆಗೆ ತೆರಳಿ ಸಮಸ್ಯೆಯನ್ನು ಆಲಿಸಿದರು.
ಸಮಸ್ಯೆಗಳನ್ನು ಬೇಗ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರಸ್ತೆಗಳಲ್ಲಿ ಕಸ ತೆಗೆಸುವುದು, ಮಳೆ ಬಂದಾಗ ನೀರು ನಿಲ್ಲುವುದನ್ನು ಸರಿಪಡಿಸಬೇಕು, ಸುತ್ತಮುತ್ತ ಹಾಗೂ ಪಾರ್ಕ್ ಗಳಲ್ಲಿ ರಾತ್ರಿ ಸಮಯದಲ್ಲಿ ಕೆಲವು ಪುಂಡ ಯುವಕರು ಮಧ್ಯಪಾನ ಮಾಡಿ ಬಾಟಲಿ ತಂದು ಹಾಕುತ್ತಾರೆ ಇದಕ್ಕೆ ಕಡಿವಾಣ ಹಾಕಿ,ಬೆಳ್ಳಗಿನ ಸಮಯ ವಾಯು ವಿಹಾರಿಗಳು ಹಿರಿಯ ನಾಗರೀಕರು ಪಾರ್ಕಿನಲ್ಲಿ ವಾಕಿಂಗ್ ಮಾಡುವುದರಿಂದ ಶೌಚಾಲಯ ವ್ಯವಸ್ಥೆ ಮಾಡಿಕೊಡಿ ಎಂದು ಸಾರ್ವಜನಿಕರು ಶಾಸಕರಲ್ಲಿ ಮನವಿ ಮಾಡಿದರು.
ಈ ವೇಳೆ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿ ನಾಗರಾಜು ಅವರನ್ನು ಕರೆದು ಈ ಪಾರ್ಕಿನ ಸುತ್ತಮುತ್ತ ಮತ್ತು ಈ ಭಾಗಗಳಲ್ಲಿ ದಿನನಿತ್ಯ ಬೀಟ್ ಪೊಲೀಸ್ ವ್ಯವಸ್ಥೆಯನ್ನು ಮಾಡಬೇಕೆಂದು ಶಾಸಕ ಶ್ರೀವತ್ಸ ತಿಳಿಸಿದರು.
ಆರೋಗ್ಯ ಅಧಿಕಾರಿ ಪ್ರಭಾಕರ್ ಅವರಿಗೆ ಇಲ್ಲೆಲ್ಲೂ ಕೂಡ ಕಸ ಹಾಕುವ ಮತ್ತು ಗುಡಿಸುವವರ ಬಗ್ಗೆ ಹೆಚ್ಚು ಗಮನ ಹರಿಸಬೇಕು ಈ ಭಾಗದಲ್ಲಿ ಮಳೆ ನೀರು ನಿಂತು ಸಾರ್ವಜನಿಕರಿಗೆ ಅನಾನುಕೂಲ ಆಗದಂತೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶಾಸಕ ಟಿ.ಎಸ್. ಶ್ರೀವತ್ಸ ಸೂಚಿಸಿದರು.
ಎಇಇ ಧನುಷ್,ಅಧಿಕಾರಿ ಬಸವಣ್ಣ, ವಾಟರ್ ಸಪ್ಲೈಯರ್ ಮಂಜುನಾಥ್, ಮಾಜಿ ಮಹಾಪೌರ ಶಿವಕುಮಾರ್, ಉಪೇಂದ್ರ, ಶ್ರೀನಿವಾಸ್, ರಮೇಶ್, ಲಕ್ಷ್ಮಣ್, ರಾಮದಾಸ್, ದೀಪಕ್, ಜೋಗಿ ಮಂಜು, ರಾಕೇಶ್ ಗೌಡ, ಜಯರಾಮ್, ಪ್ರದೀಪ್, ಕಿಶೋರ್,ಗುರುದತ್ತ, ಪಾರ್ಥ ಸಾರಥಿ, ನಿಶಾಂತ್, ಆಪ್ತ ಸಹಾಯಕ ಆದಿತ್ಯ ಮತ್ತಿತರರು ಹಾಜರಿದ್ದರು.