ಮೈಸೂರು: ನಂಜನಗೂಡಿನ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ರೌಡಿ ಲಿಸ್ಟ್ ನಲ್ಲಿರುವ ವ್ಯಕ್ತಿಯನ್ನ ಕಾಂಗ್ರೆಸ್ ಆಯ್ಕೆ ಮಾಡಿದೆ ಎಂದು ಮಾಜಿ ಶಾಸಕ ಹರ್ಷವರ್ಧನ್ ವಾಗ್ಧಾಳಿ ನಡೆಸಿದ್ದಾರೆ.
ಇದು ಶಾಸಕ ದರ್ಶನ ಧ್ರುವನಾರಾಯಣ ರವರ ಬದ್ದತೆಯನ್ನ ತೋರಿಸುತ್ತಿದೆ ಎಂದು ವ್ಯಂಗ್ಯವಾಡಿದರು.
ನಂಜನಗೂಡಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಘೋಷ್ಠಿಯಲ್ಲಿ ಮಾತನಾಡಿದ ಹರ್ಷವರ್ಧನ್,ನಂಜನಗೂಡಿನ ಶಾಸಕರಿಗೆ ಮತ್ತು ಚಾಮರಾಜನಗರ ಲೋಕಸಭಾ ಸದಸ್ಯರಿಗೆ ರಾಜಕೀಯ ಜ್ಞಾನ ಇಲ್ಲ ಎಂದು ಟೀಕಿಸಿದರು.
ಡಿವೈಎಸ್ಪಿ ಬದಲಾವಣೆಯಾಗಿ ಬೇರೆ ಡಿವೈಎಸ್ಪಿ ಬಂದರೆ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷ ರೌಡಿ ಪೆರೇಡ್ ನಲ್ಲಿ ನಿಲ್ಲಬೇಕಾಗುತ್ತದೆ ಎಂದು ಹೇಳಿದರು.
ಕನಕಪುರ ಮೂಲದ ರೆಸಾರ್ಟಿಗೆ ಬಿಜೆಪಿ ಸದಸ್ಯರನ್ನ ಕರೆದೊಯ್ದು ಹಣದ ಆಮಿಷ ಒಡ್ಡಿ ಡೀಲ್ ಮಾಡಲಾಗಿದೆ ಎಂದು ಹರ್ಷವರ್ಧನ್ ಆರೋಪಿಸಿದರು.
ತಾಲೂಕು ಘಟಕದ ಅಧ್ಯಕ್ಷ ಸಿದ್ದರಾಜು, ಬಾಲಚಂದ್ರ, ಕೆಂಡಗಣಪ್ಪ ಮತ್ತಿತರ ಮುಖಂಡರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.