ಬೆಂಗಳೂರು: ಖ್ಯಾತ ಹಾಸ್ಯನಟ ರಾಕ್‍ಲೈನ್ ಸುಧಾಕರ್ (64) ಅವರು ನಿಧನರಾಗಿದ್ದಾರೆ.
ಶುಗರ್ ಲೆಸ್ ಕನ್ನಡ ಸಿನಿಮಾದ ಚಿತ್ರೀಕರಣ ವೇಳೆ ಸೆಟ್‍ನಲ್ಲಿಯೇ ಸುಧಾಕರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ನಗರದ ಕಮಲಾನಗರ ವಾಸಿಯಾಗಿದ್ದ ಸುಧಾಕರ್ ಅವರಿಗೆ ಕಳೆದೆರಡು ತಿಂಗಳ ಹಿಂದೆ ಕೊರೊನಾ ಸೋಂಕು ತಗುಲಿತ್ತು. ನಂತರ ಅವರು ಗುಣಮುಖರಾಗಿದ್ದರು.
ಡಕೋಟಾ ಎಕ್ಸ್‍ಪ್ರೆಸ್ ಸಿನಿಮಾದ ಮೂಲಕ ಅಭಿನಯ ಪ್ರಾರಂಭಿಸಿದ್ದ ಸುಧಾಕರ್ ಪಂಚರಂಗಿ, ಪರಮಾತ್ಮ, ಮಿಸ್ಟರ್ ಆಂಡ್ ಮಿಸಸ್ ರಾಮಚಾರಿ ಸೇರಿದಂತೆ 120ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು.
ಸುಧಾಕರ್ ನಿಧನಕ್ಕೆ ಚಿತ್ರರಂಗ ಸಂತಾಪ ಸೂಚಿಸಿದೆ.