ಎರಡನೆ ಹಂತದ ಗಜಪಡೆಗೆ ತೂಕ: ಸುಗ್ರೀವನೆ ಬಲವಾನ್

ಮೈಸೂರು: ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ಎರಡನೇ ಹಂತದ ಗಜಪಡೆಗೆ ಶುಕ್ರವಾರ ತೂಕ ನಡೆಸಲಾಯಿತು.

ಗುರುವಾರ ಸಂಜೆ ಹುಣಸೂರಿನಿಂದ ಆಗಮಿಸಿದ ಗಜಪಡೆಯನ್ನು ಅರಮನೆಯ ದ್ವಾರದಲ್ಲಿ ಸಾಂಪ್ರ ದಾಯಿಕವಾಗಿ ಪೂಜೆ ಮಾಡಿ ಬರಮಾಡಿಕೊಳ್ಳ ಲಾಯಿತು.

ಶುಕ್ರವಾರ ಬೆಳಗ್ಗೆ ಮೊದಲನೇ ಗಜಪಡೆಯ ಜೊತೆಗೆ ಎರಡನೇ ಗಜ ಪಡೆಯನ್ನು ಕೆಆರ್ ಸರ್ಕಲ್ ಮಾರ್ಗ ವಾಗಿ ವೇ ಬ್ರಿಡ್ಜ್ ಗೆ ಕರೆತರಲಾಯಿತು.

ಎರಡನೇ ಹಂತದಲ್ಲಿ ಆಗಮಿಸಿರುವ ಆನೆಗಳಲ್ಲಿ ಪ್ರಶಾಂತ 4875 ಕೆ.ಜಿ, ಹಿರಣ್ಯ 2930, ಮಹೇಂದ್ರ 4910, ದೊಡ್ಡ ಲಕ್ಷ್ಮಿ 3485 ಮತ್ತು ಸುಗ್ರೀವ 5190 ಕೆಜಿ ತೂಗುತ್ತಿವೆ.ಸುಗ್ರೀವ ಹೆಚ್ಚು ತೂಕ ಹೊಂದಿರುವ ಆನೆ.

ತೂಕ ಮಾಡಿಸಿದ ನಂತರ ಎಲ್ಲಾ ಆನೆಗಳನ್ನು ಮತ್ತೆ ಅರಮನೆ ಆವರಣಕ್ಕೆ ಕರೆತರಲಾಯಿತು