ಬಳ್ಳಾರಿ: ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಗಣೇಶ ಚತುರ್ಥಿ ಆಚರಿಸಿದರೂ ಕೂಡಾ ಆರೋಪಿ ದರ್ಶನ್‌ಗೆ ಗಣೇಶನ ದರ್ಶನ ಭಾಗ್ಯ ಸಿಗದಂತಾಗಿದೆ.
ಜೈಲು ಒಳಭಾಗದಲ್ಲಿ ಬಾಳೆ ಕಂಬ, ಬಲೂನ್, ಲೈಟಿಂಗ್, ಹಣ್ಣು, ಚಿತ್ತಾರದ ಹಾಳೆಯ ಅಲಂಕಾರದೊಂದಿಗೆ ಗಣೇಶ ಮೂರ್ತಿ ಪ್ರತಿಷ್ಟಾಪಿಸಲಾಯಿತು.
ಗಣೇಶ ಕೂರಿಸುವುದು ಜೈಲು ಸಿಬ್ಬಂದಿ ಮಾತ್ರ. ಆದರೆ, ಪ್ರತಿ ವರ್ಷ ಎಲ್ಲಾ ಕೈದಿಗಳು ಸೇರಿ ಅದ್ದೂರಿ ಯಾಗಿ ಅಲಂಕಾರ ಮಾಡಿ ಹಬ್ಬ ಮಾಡುತ್ತಿದ್ದರು.
ಈ ವರ್ಷ ದರ್ಶನ್ ಜೈಲಿನಲ್ಲಿರುವ ಹಿನ್ನೆಲೆ ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಗಣೇಶನ ದರ್ಶನ ಮಾಡಿ ಕೈ ಮುಗಿದು ಪ್ರಾರ್ಥನೆ ಮಾಡಲು ಮಾತ್ರ ಅವಕಾಶ ನೀಡಲಾಗಿದೆ. ಜೈಲಿನಲ್ಲಿ ಯಾವುದೇ ಸಾಂಸ್ಕೃತಿಕ ಚಟುವಟಿಕೆಗೆ ಅವಕಾಶ ನೀಡಿಲ್ಲ.
ಜೈಲಿನಲ್ಲಿ 3 ಅಡಿ ಎತ್ತರದ ಇಲಿಯ ಮೇಲೆ ಕುಳಿತಿ ರುವ ವಿಘ್ನೇಶ್ವರನ ಮಣ್ಣಿನ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಹೈ ಸೆಕ್ಯುರಿಟಿ ಸೆಲ್‌ನಲ್ಲಿ ಆರೋಪಿ ದರ್ಶನ್ ಸೇರಿದಂತೆ ಇತರೆ ಮೂರು ಕೈದಿಗಳಿದ್ದಾರೆ.ದರ್ಶನ್ ಸೇರಿ ಹೈ ಸೆಕ್ಯೂರಿಟಿ ಸೆಲ್‌ನಲ್ಲಿರುವ ಯಾವೊಬ್ಬ ಕೈದಿಗೂ ಗಣೇಶ ಪೂಜೆಗೆ ಅವಕಾಶ ನೀಡಲಾಗಿಲ್ಲ.