ನವದೆಹಲಿ: ಬೋಯಿಂಗ್‌ನಲ್ಲಿ ಹಾನಿಗೊಳಗಾದ ಸ್ಟಾರ್‌ಲೈನರ್ ಕ್ಯಾನ್ಸುಲ್ ನ್ಯೂ ಮೆಕ್ಸಿಕೋದ ವೈಟ್ ಸ್ಯಾಂಡ್ಸ್ ಸ್ಪೇಸ್ ಹಾರ್ಬ‌್ರರ್ ನಲ್ಲಿ ಯಶಸ್ವಿಯಾಗಿ ಇಳಿದಿದೆ ಆದರೆ ಸುನಿತಾ ವಿಲಿಯಮ್ಸ್ ವಾಪಸಾಗಲು ಸಾಧ್ಯವಾಗಿಲ್ಲ ಎಂದು ನಾಸಾ ತಿಳಿಸಿದೆ.
ನಾಸಾದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ನೋರ್ ಅವರನ್ನು ಬಿಟ್ಟು ಗಗನಯಾನಿ ನೌಕೆ ಬಂದಿದ್ದು, ಮುಂದಿನ ಫೆಬ್ರವರಿಯಲ್ಲಿ ಈ ಗಗನಯಾತ್ರಿಗಳು ಭೂಮಿಗೆ ಮರಳಲಿದ್ದಾರೆ ಎಂದು ನಾಸಾ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕ್ಯಾಪ್ಸುಲ್ ತನ್ನ ಪ್ರಯಾಣವನ್ನು ಪೂರ್ಣಗೊಳಿಸಲು ಆರು ಗಂಟೆಗಳನ್ನು ತೆಗೆದುಕೊಂಡಿತು. ಹೀಲಿಯಂ ಸೋರಿಕೆ ಸೇರಿದಂತೆ ತಾಂತ್ರಿಕ ದೋಷಗಳನ್ನು ಅನುಭವಿಸಿದ ನಂತರ ಬಾಹ್ಯಾಕಾಶ ನೌಕೆಯು ಗಗನಯಾತ್ರಿಗಳಿಲ್ಲದೆಯೇ ಮರಳಿದೆ.
ವಿಕ್ಟೋರ್ ಮತ್ತು ಸುನೀತಾ ವಿಲಿಯಮ್ಸ್ ಐಎಸ್‌ಎಸ್‌ನಲ್ಲಿ ಹೆಚ್ಚುವರಿ ಆಹಾರ ಮತ್ತು ಸರಬರಾಜುಗಳನ್ನು ಹೊಂದಿದ್ದು ಫೆಬ್ರವರಿ 2025 ರಲ್ಲಿ ಸ್ಪೇಸ್‌ಎಕ್ಸ್ ವಾಹನದಲ್ಲಿ ಭೂಮಿಗೆ ಹಿಂತಿರುಗುತ್ತಾರೆ ಎಂದು ನಾಸಾ ಸ್ಪಷ್ಟಪಡಿಸಿದೆ.