ಕಿರಿಯ ಅಭಿಯಂತರ ಸಸ್ಪೆಂಡ್

ಮೈಸೂರು: ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಕಿರಿಯ ಅಭಿಯಂತರೊಬ್ಬರನ್ನು ಮೈಸೂರು ಜಿಲ್ಲಾಧಿಕಾರಿಗಳು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.

ಹೆಚ್.ಡಿ.ಕೋಟೆ ಪುರಸಭೆಯ ಕಿರಿಯ ಅಭಿಯಂತರ ಕೆ. ಸುರೇಶ್ ರನ್ನು ಕರ್ತವ್ಯ ನಿರ್ಲಕ್ಷ್ಯತೆ ಹಾಗೂ ಕರ್ತವ್ಯ ಲೋಪದ ಮೇರೆಗೆ ಅಮಾನತುಪಡಿಸ ಲಾಗಿದೆ.

ಕೆ.ಸುರೇಶ್ ಮೇಲಿನ ಇಲಾಖಾ ವಿಚಾರಣೆ ಕಾಯ್ದಿರಿಸಿ ಸರ್ಕಾರಿ ಸೇವೆಯಿಂದ ಅಮಾನತ್ತಿನಲ್ಲಿಟ್ಟು ಜಿಲ್ಲಾಧಿ ಕಾರಿ ಜಿ. ಲಕ್ಷ್ಮಿಕಾಂತ ರೆಡ್ಡಿ ಆದೇಶ ಹೊರಡಿಸಿ ದ್ದಾರೆ.