ಮೈಸೂರು: ಮುಸ್ಲಿಂರ ಕೈಯಲ್ಲಿರುವ ಪೆಟ್ರೋಲ್ ಬಾಂಬ್, ತಲ್ವಾರ್ ಗಳನ್ನ ಸರ್ಕಾರ ಕಿತ್ತುಕೊಳ್ಳಬೇಕು,
ಇಲ್ಲದಿದ್ದರೆ ಮುಂದೆ ನಡೆಯುವ ಗಣೇಶ ಮೆರವಣಿಗೆಳಲ್ಲಿ ನಾವು ಅವುಗಳನ್ನು ಹಿಡಿಯಬೇಕಾಗುತ್ತದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಗುಡುಗಿದ್ದಾರೆ.
ಒಂದು ವೇಳೆ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ಸರ್ಕಾರವೇ ನೇರ ಹೊಣೆ ಎಂದು ಎಚ್ವರಿಸಿದರು.
ಕೇಂದ್ರ ಸಚಿವ ವಿ.ಸೋಮಣ್ಣ ಅವರೊಂದಿಗೆ ಸಭೆಯಲ್ಲಿ ಪಾಲ್ಗೊಂಡಿದ್ದ ವೇಳೆ ಅವರು ಮಾಧ್ಯಮದೊಂದಿಗೆ ಮಾತನಾಡಿದರು.
ಗಣೇಶ ಮೆರವಣಿಗೆ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆಯುತ್ತದೆ,ಅಷ್ಟರಲ್ಲಿ ಸರ್ಕಾರ ಅನ್ಯ ಕೋಮಿನ ಪುಂಡರ ಮೇಲೆ ನಿಯಂತ್ರಣ ಹೇರಬೇಕು,ನಿಯಂತ್ರಣ ಹೇರದಿದ್ದರೆ ನಮ್ಮ ರಕ್ಷಣೆಯ ಜವಾಬ್ದಾರಿ ನಮಗೆ ಗೊತ್ತಿದೆ ಎಂದು ಹೇಳಿದರು.
ನಾಗಮಂಗಲ ಗಲಭೆ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಅಮಾಯಕ ಹಿಂದುಗಳ ಬಂಧನ ನಡೆದರೆ ಸುಮ್ಮನಿರುವುದಿಲ್ಲ, ನಾವು ಮತ್ತೆ ನಾಗಮಂಗಲಕ್ಕೂ ಬರುತ್ತೇವೆ ಪೊಲೀಸ್ ಠಾಣೆಗೂ ಬರುತ್ತೇವೆ, ಗಲಾಟೆ ಶುರು ಮಾಡಿದವರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಆರ್ ಎಸ್ ಎಸ್ ಸಮನ್ವಯ ಸಭೆ ವಿಚಾರದ ಬಗ್ಗೆ ಮಾತನಾಡಿದ ಸಿಂಹ,ನಾನು ಸಭೆಯಲ್ಲಿ ಯಾವ ಅಸಮಾಧಾನ ವ್ಯಕ್ತ ಪಡಿಸಿಲ್ಲ ಸಭೆಯ ಕೊನೆಯ ಬೆಂಚ್ ನಲ್ಲಿ ಕುಳಿತುಕೊಂಡು ಅವರು ಹೇಳಿದ್ದನ್ನ ಕೇಳಿಕೊಂಡು ಎದ್ದು ಬಂದಿದ್ದೇನೆ. ಆರ್ ಎಸ್ ಎಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವಷ್ಟು ನಾನು ದೊಡ್ಡವನಾಗಿಲ್ಲ. ಆರ್ ಎಸ್ ಎಸ್ ನಿಂದಲೇ ಬೆಳೆದವನು ನಾನು ಎಂದು ಸ್ಪಷ್ಟಪಡಿಸಿದರು.
ಮಹಿಷ ದಸರಾ ಕುರಿತು ಮಾತನಾಡಿದ ಪ್ರತಾಪ್ ಸಿಂಹ ನಾನು ಎಂಪಿಯಾಗಿದ್ದರು ಅಷ್ಟೇ ಆಗದಿದ್ದರೂ ಅಷ್ಟೇ,ತಾಯಿ ಚಾಮುಂಡಿಗೆ ಅವಮಾನವಾಗುವುದಕ್ಕೆ ಬಿಡುವುದಿಲ್ಲ,ಬೆಟ್ಟದಲ್ಲಿ ಮಹಿಷ ದಸರಾ ನಡೆಸಲು ಬಿಡುವುದಿಲ್ಲ ಎಂದು ಕಡಕ್ಕಾಗಿ ಹೇಳಿದರು.
ಮೂಡಾ ಹಗರಣ ವಿಚಾರ ಕೋರ್ಟ್ ನಲ್ಲಿದೆ.
ಆ ಕೇಸ್ ವಿಚಾರ ಏನೇ ಆಗಲಿ ಅದು ಬೇರೆ ವಿಚಾರ,ಆದರೆ, ವಾಲ್ಮೀಕಿ ಹಗರಣದಲ್ಲಿ ಸಿಎಂ ತಲೆದಂಡ ನಿಶ್ಚಿತ ಎಂದು ಇದೇವೇಳೆ ಅವರು ಭವಿಷ್ಯ ನುಡಿದರು.