ಬೆಂಗಳೂರು: ದರ್ಶನ್ ಗೆ ರಾಜಾತಿಥ್ಯ ನೀಡಿದ್ದಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿ ಮೊಬೈಲ್, ಮಾದಕ ವಸ್ತು,ಹಣ ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪಡೆದಿದ್ದ ದರ್ಶನ್ ಹಾಗೂ ವಿಲ್ಸನ್ಗಾರ್ಡನ್ ನಾಗನ ಫೋಟೋ ವೈರಲ್ ಆದ ಬೆನ್ನಲ್ಲೇ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಪೊಲೀಸರು ಹದ್ದಿನ ಕಣ್ಣಿದ್ದರು, ಇದೀಗ ದಿಢೀರ್ ದಾಳಿ ನಡೆಸಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನ ಮೇಲೆ ಆಗ್ನೇಯ ಪೊಲೀಸರು ದಾಳಿ ನಡೆದಿದ್ದು, ರಾತ್ರಿ ಏಕಾಏಕಿ ಡಿಸಿಪಿ ಸರಾ ಫಾತಿಮಾ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಪೊಲೀಸರು ದಾಳಿ ನಡೆಸಿದ್ದಾರೆ.
ಕುಖ್ಯಾತ ರೌಡಿ ವಿಲ್ಸನ್ಗಾರ್ಡನ್ ನಾಗನ ಬ್ಯಾರಕ್ ಅಕ್ಕಪಕ್ಕದಲ್ಲಿ ಮೊಬೈಲ್ಗಳು ಪತ್ತೆಯಾಗಿದ್ದು, ನಾಗನ ಫೋನ್ ಸೇರಿ ಸುಮಾರು 18 ಆಂಡ್ರಾಯ್ಡ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಲ್ಲದೆ ಮಾದಕ ವಸ್ತು ಹಾಗೂ ಹಣವನ್ನು ವಶಕ್ಕೆ ಪಡೆದಿದ್ದಾರೆ.