ಮೈಸೂರು: ಮೈಸೂರಿನ ಕೆ.ಆರ್. ಕ್ಷೇತ್ರದಲ್ಲಿ 1ಲಕ್ಷ ಸದಸ್ಯರನ್ನು ನೋಂದಣಿ ಮಾಡಿಸುವ ಗುರಿ ಹೊಂದಲಾಗಿದೆ ಎಂದು ಕ್ಷೇತ್ರದ ಶಾಸಕ ಶ್ರೀವತ್ಸ ತಿಳಿಸಿದರು.
ದೇಶಾದ್ಯಂತ ಬಿಜೆಪಿ ಸದಸ್ಯತ್ವ ಅಭಿಯಾನ ಪ್ರಾರಂಭಗೊಂಡಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಥಮ ಸದಸ್ಯತ್ವವನ್ನು ಪಡೆಯುವ ಮೂಲಕ ನೊಂದಣಿ ಅಭಿಯಾನಕ್ಕೆ ಚಾಲನೆ ನೀಡಿದ್ದರು.
ಸೋಮವಾರ ಮೈಸೂರಿನ ಅಗ್ರಹಾರದ 101 ಗಣಪತಿ ದೇವಸ್ಥಾನದಲ್ಲಿ ಬಿಜೆಪಿ ಕೃಷ್ಣರಾಜ ಕ್ಷೇತ್ರದ ವತಿಯಿಂದ ಸದಸ್ಯತ್ವ ಅಭಿಯಾನದ ಪ್ರಚಾರ ವಾಹನಕ್ಕೆ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಹಸಿರು ನಿಶಾನೆ ತೋರಿದರು.
ಹಲವು ಯುವಕರಿಗೆ ಸದಸ್ಯತ್ವ ನೊಂದಣಿ ಮಾಡಿಸುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಶಾಸಕರು ದೇಶದಲ್ಲಿ ನಿಜವಾದ ರಾಷ್ಟ್ರೀಯ ಪಕ್ಷ ಎಂದರೆ ಅದು ಬಿಜೆಪಿ ಮಾತ್ರ, ಏಕೆಂದರೆ ದೇಶದ ಉದ್ದಗಲಕ್ಕೂ ತನ್ನ ಪ್ರಾತಿನಿಧ್ಯವನ್ನು ಹೊಂದಿದೆ ಎಂದು ತಿಳಿಸಿದರು.
2000ದ ನಂತರ ಜನಿಸಿದ ಜನರೇಷನ್ – Z ಎಂದು ಕರೆಯಲ್ಪಡುವ 18-24 ವರ್ಷದ ಯುವಕ- ಯುವತಿಯರು ಭಾರತೀಯ ಜನತಾ ಪಕ್ಷ ಸೇರಲು ಹುಮ್ಮಸ್ಸಿನಿಂದ ಇದ್ದಾರೆ. ಇಂತಹ ಯುವ ಪೀಳಿಗೆಯ ಆಸಕ್ತರನ್ನು ಪಕ್ಷದ ಸದಸ್ಯರನ್ನಾಗಿ ಭರಮಾಡಿಕೊಳ್ಳುವತ್ತ ನಾವೆಲ್ಲಾ ಒಟ್ಟುಗೂಡಿ ಕೆಲಸ ಮಾಡಬೇಕು ಎಂದು ಶ್ರೀವತ್ಸ ಕರೆ ನೀಡಿದರು.
ನಮ್ಮ ಕ್ಷೇತ್ರದಲ್ಲಿ ಪಕ್ಷವು 1 ಲಕ್ಷ ಸದಸ್ಯರ ಗುರಿಯನ್ನ ಹೊಂದಿದೆ. ಗುರಿಯನ್ನು ಮುಟ್ಟಲು ಈ ಪ್ರಚಾರ ವಾಹನ ಪೂರಕವಾಗಿ ಕೆಲಸಮಾಡಲಿದೆ. ಇಂದಿನಿಂದ 1 ತಿಂಗಳುಗಳ ಕಾಲ ಕ್ಷೇತ್ರಾದ್ಯಂತ ಎಲ್ಲ ಕಾಲೇಜುಗಳು, ಸರ್ಕಲ್ ಗಳು ಪ್ರಮುಖ ಜನಸಂದಣಿ ಪ್ರದೇಶಗಳಿಗೆ ಪ್ರಚಾರವಾಹನ ಸಂಚರಿಸಲಿದೆ ಎಂದು ತಿಳಿಸಿದರು.
ಭಾರತವನ್ನ ವಿಶ್ವಗುರುವನ್ನಾಗಿಸುವ ದ್ಯೇಯ ಹೊಂದಿರುವ ಏಕೈಕ ರಾಜಕೀಯ ಪಕ್ಷ ಭಾರತೀಯ ಜನತಾ ಪಾರ್ಟಿ. ಆದ್ದರಿಂದ ರಾಷ್ಟ್ರೀಯತೆಯ ವಿಚಾರಧಾರೆಯ ಬಿಜೆಪಿ ಸದಸ್ಯರಾಗುವ ಮೂಲಕ ಬೆಂಬಲಿಸಬೇಕೆಂದು ಕೋರಿದರು.
ಸದಸ್ಯರಾಗ ಬಯಸುವವರು 8800002024 ನಂಬರ್ ಗೆ ಮಿಸ್ ಕಾಲ್ ನೀಡಬಹುದು ಅಥವ ಬಿಜೆಪಿ ಕಾರ್ಯಕರ್ತರನ್ನು ಸಂಪರ್ಕಿಸಿ ಸದಸ್ಯರಾಗಬಹುದು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷರಾದ ರಘು ಕೌಟಿಲ್ಯ, ನಗರ ಬಿಜೆಪಿ ಅಧ್ಯಕ್ಷ ನಾಗೇಂದ್ರ, ಕ್ಷೇತ್ರದ ಅಧ್ಯಕ್ಷ ರಘು ಅರಸ್, ಮೈ.ವಿ. ರವಿಶಂಕರ್, ಯುವಮೋರ್ಚಾ ಅಧ್ಯಕ್ಷ ಕೆ.ಎಂ. ನಿಶಾಂತ್, ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಗಳಾದ, ಜಯರಾಂ, ಜಯಶಂಕರ್, ಗಿರಿದರ್, ಸೋಮಸುಂದರ್, ಬಿ.ಎಂ ರಘು, ಕೇಬಲ್ ಮಹೇಶ್, ಮಾಜಿ ಮಾಹಾಪೌರರಾದ ಶಿವಕುಮಾರ್, ಜೋಗಿ ಮಂಜು, ವಿಶ್ವೇಶ್ವರಯ್ಯ, ರಾಕೇಶ್ ಗೌಡ, ಬಿ.ವಿ ಮಂಜುನಾತ್, ಸರ್ವಮಂಗಳ, ಹರೀಶ್, ನವೀನ್, ನಂದೀಶ್, ಸೌಮ್ಯ ಉಮೇಶ್, ರಮೇಶ್, ಅಕ್ಷಯ್, ಮಧು ಗೌಡ, ಹರ್ಷ, ಪ್ರತೀಕ್, ಚರಣ್, ವರುಣ್, ಶಿವಪ್ರೇರಣ್, ಶ್ರೀಕಂಠ, ರಮೇಶ್, ಶಿವಪ್ರಕಾಶ್ ಮತ್ತಿತರರು ಹಾಜರಿದ್ದರು.