ಖ್ಯಾತ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ವಿಧಿವಶ

ಚೆನ್ನೈ: ಬಹು ಭಾಷಾ ಖ್ಯಾತ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ಇಹಲೋಕ ತ್ಯಜಿಸಿದ್ದಾರೆ.
ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯ ಅವರು ಶುಕ್ರವಾರ ಮಧ್ಯಾಹ್ನ ಸುಮಾರು 1 ಗಂಟೆ 4 ನಿಮಿಷಕ್ಕೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಎಸ್.ಪಿ.ಬಿ. ಅವರಿಗೆ ಕಳೆದ 51 ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು.
ಆಸ್ಪತ್ರೆಗೆ ಎಸ್ ಬಿಪಿ ಅವರ ಪತ್ನಿ ಸರಸ್ವತಿ, ಪುತ್ರ ಚರಣ್, ಪುತ್ರಿ ಪಲ್ಲವಿ, ಸಹೋದರಿ ಶೈಲಜಾ ಅವರು ಭೇಟಿ ನೀಡಿದ್ದಾರೆ.
ಆಸ್ಪತ್ರೆಯ ಸುತ್ತಮುತ್ತ ಪೆÇಲೀಸ್ ಭದ್ರತೆ ನಿಯೋಜಿಸಲಾಗಿದೆ.
ಬಾಲಸುಬ್ರಹ್ಮನ್ಯಂ ಅವರ ಪುತ್ರ ಚರಣ್ ಆಸ್ಪತ್ರೆ ಬಳಿ ಮಾತನಾಡಿ, ನಮ್ಮ ತಂದೆ ಪರ ಪ್ರಾರ್ಥನೆ ಮಾಡಿದ ಎಲ್ಲರಿಗೂ ವಂದನೆಗಳು. ನೀವೆಲ್ಲರೂ ಇರುವ ವರೆಗೆ ನಮ್ಮ ತಂದೆ ನೆನೆಪು ಇರುವುದು ಎಂದು ಚರಣ್ ದುಖಃತಪ್ತರಾಗಿ ತಿಳಿಸಿದರು.
ಎಸ್.ಪಿಬಿ ಜೂ. 4, 1946ರಂದು ಆಂಧ್ರಪ್ರದೇಶ ಚಿತ್ತೂರಿನ ಕೊನೇಟಮ್ಮಪೇಟಾ ಗ್ರಾಮದಲ್ಲಿ ಜನಿಸಿದ್ದರು.
ಭಾರತದ ಸುಪ್ರಸಿದ್ಧ ಹಿನ್ನೆಲೆ ಗಾಯಕರಾಗಿ ಜನಪ್ರಿಯರಾಗಿದ್ದರು. ಕನ್ನಡ, ತಮಿಳು ಮತ್ತು ತೆಲುಗು ಸೇರಿದಂತೆ ಹಲವು ಭಾಷೆಗಳ ಜನಪ್ರಿಯ ಗಾಯಕರಾಗಿದ್ದರು.
ಕೇವಲ ಗಾಯನದಲ್ಲಷ್ಟೇ ಅಲ್ಲದೆ, ನಟನೆ, ಸಂಗೀತ ಸಂಯೋಜನೆ, ಚಲನಚಿತ್ರ ನಿರ್ಮಾಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದರು.
ವಿವಿಧ ಭಾಷೆಗಳಲ್ಲಿ ಒಟ್ಟು 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದ ಬಾಲಸುಬ್ರಮಣ್ಯಂ ಅವರಿಗೆ ನಾಲ್ಕು ಭಾಷೆಗಳಲ್ಲಿ ಒಟ್ಟು 6 ರಾಷ್ಟ್ರ ಪ್ರಶಸ್ತಿಗಳು ಬಂದಿದ್ದವು.
ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳು ಕೂಡ ಅವರಿಗೆ ಸಂದಿದ್ದವು. ವಿಶೇಷ ಅಂದರೆ 25 ಬಾರಿ ಆಂಧ್ರಪ್ರದೇಶ ಸರ್ಕಾರದ ನಂದಿ ಪ್ರಶಸ್ತಿ ಎಸ್.ಪಿ.ಬಿ ಅವರಿಗೆ ಒಲಿದಿತ್ತು.