ಮೈಸೂರು: ಮೈಸೂರು ಅರಮನೆ ಮತ್ತು ಇತರೆ ಐತಿಹಾಸಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಧಾನ್ಯ ಚೆಲ್ಲುವುದನ್ನು ನಿಷೇಧಿಸುವ ಬಗ್ಗೆ ಸಂಘ ಸಂಸ್ಥೆಗಳು ಸಂಸದ ಯದುವೀರ್ ಒಡೆಯರ್ ಜತೆ ಮಾತುಕತೆ ನಡೆಸಿ ಮನವಿ ಸಲ್ಲಿಸಿದರು
ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾ ನದ ಆವರಣದಲ್ಲಿ ಯದುವೀರ್ ಅವರಿಗೆ ಸಂಘ ಸಂಸ್ಥೆಗಳಾದ ಕ್ಲೀನ್ ಮೈಸೂರು ಫೌಂಡೇಶನ್, ಮೈಸೂರು ಗ್ರಾಹಕರ ಪರಿಷತ್ತು,ಸುರಕ್ಷಾ ಫೌಂಡೇಶನ್, ಮೈಸೂರು ಟ್ರಾವೆಲ್ ಅಸೋಸಿಯೇಷನ್, ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟ, ಗಂಧದಗುಡಿ ಫೌಂಡೇಶನ್, ಅರಣ್ಯ ಔಟ್ರೇಚ್, ವಿಶ್ವ ಹಿಂದೂ ಪರಿಷತ್ ಸಂಘ ಸಂಸ್ಥೆಗಳ ವತಿಯಿಂದ ಮನವಿ ಸಲ್ಲಿಸಲಾಯಿತು.
ಮೈಸೂರು ಅರಮನೆ ಮತ್ತು ಮೈಸೂರಿನ ಇತರೆ ಐತಿಹಾಸಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಧಾನ್ಯ ಚೆಲ್ಲುವುದನ್ನು ನಿಷೇಧಿಸುವ ಕುರಿತು ಮಾನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಯದುವೀರ್ ಸಭೆ ನಡೆಸಿದರು.
ಪಾರಿವಾಳಗಳಿಗೆ ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಪ್ರತಿ ದಿನ ಹೆಲ್ಪಿಂಗ್ ಹ್ಯಾಂಡ್ ಸಂಸ್ಥೆಯವರು ಧಾನ್ಯಗಳನ್ನು ಹಾಕುತಿದ್ದರು.
ಧಾನ್ಯ ಹಾಕುವುದು ಸಹನಭೂತಿಯ ಕ್ರಿಯೆ, ಆದರೆ ಇದರಿಂದ ಪಾರಂಪರಿಕ ಕಟ್ಟಡಗಳಿಗೆ ಹಾನಿ ಉಂಟಾ ಗುತ್ತಿದೆ,ಆದ್ದರಿಂದ ಇದನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಸಂಘ ಸಂಸ್ಥೆಗಳು ಸಲ್ಲಿಸಿದ ಮನವಿ ಪರಿಶೀಲಿಸಿ, ಕಾನೂನಾತ್ಮಕವಾಗಿ ಪಾರಿವಾಳ ಗಳಿಗೆ ಆಹಾರ ಪದಾರ್ಥಗಳನ್ನು ಹಾಕುವುದನ್ನು ನಿಷೇಧಿಸಲು ಕ್ರಮ ಕೈಗೊಳ್ಳಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸಂಸದರು ಸೂಚನೆ ನೀಡಿದರು.