ಚೆನ್ನಾಗಿ ಕುಡಿಸಿ ಭಾವಮೈದುನನ ಕೊಂದ ಭಾವ

ಮೈಸೂರು: ಕುಡಿದ ಮತ್ತಲ್ಲಿ ಬಾಮೈದನನ್ನು ಭಾವ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಸಾಂಸ್ಕೃತಿಕ ನಗರಿಯಲ್ಲಿ ನಡೆದಿದೆ.

ಮೈಸೂರಿನ ಮೇಟಗಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಈಡಿಗರ ಬೀದಿ ನಿವಾಸಿ. ಮನೋಜ್ ( 26) ಕೊಲೆಯಾದ ದುರ್ದೈವಿ.ವಿನೋದ್ ಬಾಮೈದನನ್ನ ಕೊಲೆಗೈದ ಬಾವ.

ಹಣಕಾಸಿನ ವಿಚಾರಕ್ಕೆ ಮನೆಯಲ್ಲಿ ನಿತ್ಯ ಜಗಳವಾಗು ತ್ತಿತ್ತು.ಕುಡಿದು ಮನೋಜ್ ಮನೆಗೆ ಬಂದು ಗಲಾಟೆ ಮಾಡುತ್ತಿದ್ದ, ಮನೋಜ್ ನ ಉಪಟಳ ತಾಳಲಾರದೆ ವಿನೋದ್ ಕೊಲೆ ಮಾಡಿದ್ದಾನೆ.

ಟ್ರೂ ಸ್ಪಿರಿಟ್ ಬಾರ್ ನಲ್ಲಿ ಕುಡಿದು ಗಲಾಟೆ ನಡೆದ ನಂತರ ವಿನೋದ್ ಈ ಹತ್ಯೆ ಮಾಡಿದ್ದಾನೆ.

ಬಾರ್ ನಲ್ಲಿ ರೂಮ್ ಬಾಡಿಗೆ ಪಡೆದು ಬಾವಾ, ಬಾಮೈದನ ಜೊತೆಯಲ್ಲೆ ಕುಡಿದಿದ್ದಾರೆ. ಕಂಠಪೂರ್ತಿ ಕುಡಿಸಿ ಪ್ರಜ್ಞೆ ತಪ್ಪಿದ ಮೇಲೆ ಮನಸೋ ಇಚ್ಛೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಬಾವ ವಿನೋದ್ ಪರಾರಿಯಾಗಿದ್ದಾನೆ.

ಮೇಟಗಳ್ಳಿ ಠಾಣೆ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ವಿನೋದ್ ಬಂಧನಕ್ಕೆ ಬಲೆ ಬೀಸಿದ್ದಾರೆ.