ದರ್ಶನ್ ನಿವಾಸದ ಬಳಿ ಬಿಗಿ ಭದ್ರತೆ

ಬೆಂಗಳೂರು: ನಟ ದರ್ಶನ್‌ಗೆ ಮಧ್ಯಂತರ ಜಾಮೀನು ಸಿಕ್ಕಿದ್ದರೂ ನೆಮ್ಮದಿಯಂತೂ ದೂರವೆ ಆಗಿದೆ.

ಏಕೆಂದರೆ ದರ್ಶನ್ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ, ದರ್ಶನ್‌‌ ಕೂತರು ನಿಂತರೂ ಅಂದರೆ ಅವರ ಪ್ರತಿ ಚಲನವಲನದ ಮೇಲೆ ಅತಿ‌ ಎಚ್ಚರ ವಹಿಸಿದ್ದಾರೆ.

ಜತೆಗೆ‌ ದರ್ಶನ್ ನೋಡಲು ಬೇರೆ,ಬೇರೆ ಊರುಗಳು,ಜಿಲ್ಲೆ ಗಳಿಂದ ಫ್ಯಾನ್ಸ್ ಗಳು ಬರುತ್ತಲೇ ಇರುವುದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆ ಆಗಬಾರದೆಂಬ ಮುನ್ನೆಚ್ಚರಿಕೆಯಿಂದ 50 ಕ್ಕೂ ಹೆಚ್ಚು ಪೊಲೀಸರನ್ನು ಹೊಸಕೆರೆಹಳ್ಳಿ ಠಾಣೆ ಹಿರಿಯ ಅಧಿಕಾರಿಗಳು ನಿಯೋಜಿಸಿದ್ದಾರೆ.

ಶಿವಮೊಗ್ಗದಿಂದ ಬಂದಿರುವ ಕಾರ್ತಿಕ್ ಎಂಬ ಅಭಿಮಾನಿ ಟೆಡ್ಡಿಬೇರ್ ಡ್ರೆಸ್ ನಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.ಜತೆಗೆ ಕೈನಲ್ಲಿ ರೆಸ್ಪೆಕ್ಟ್‌ ಉಮೆನ್ಸ್, ಸ್ಟಾಪ್‌ ವೈಯಲೆನ್ಸ್ ಎಂಬ ಪೋಸ್ಟರ್ ಹಿಡಿದು ದರ್ಶನ್ ನೋಡಲು ಕಾಯುತ್ತಿದ್ದಾರೆ.

ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ಪತ್ನಿ‌ ವಿಜಯಲಕ್ಷ್ಮಿ ಅವರ ಫ್ಲ್ಯಾಟ್ ‌ನಲ್ಲಿ ತಂಗಿರುವ ದರ್ಶನ್‌,ತಮ್ಮ ಮಗ ವಿನೀಶ್‌ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.