ಮಠ ಚಿತ್ರ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆಗೆ ಶರಣು

ಬೆಂಗಳೂರು: ಸ್ಯಾಂಡಲ್ ವುಡ್ ನ ಖ್ಯಾತ ಚಲನಚಿತ್ರ ನಿರ್ದೇಶಕ ಗುರುಪ್ರಸಾದ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮಠ, ಎದ್ದೇಳು ಮಂಜುನಾಥ,ಡೈರೆಕ್ಟರ್ ಸ್ಪೆಷಲ್,ರಂಗನಾಯಕ ಸೇರಿದಂತೆ ಹಲವಾರು ಪ್ರಸಿದ್ಧ ಚಲನಚಿತ್ರಗಳನ್ನು ಗುರುಪ್ರಸಾದ್ ನಿರ್ದೇಶನ ಮಾಡಿ ಸ್ಯಾಂಡಲ್ ವುಡ್ ನಲ್ಲಿ ಖ್ಯಾತಿ ಪಡೆದಿದ್ದರು.ಅಲ್ಲದೆ 12 ಚಲನ‌ಚಿತ್ರಗಳಲ್ಲಿ ‌ನಟಿಸಿದ್ದರು.ಬಿಗ್ ಬಾಸ್ ರಿಯಾಲಿಟಿ ಶೋನಲ್ಲೂ ಪಾಲ್ಗೊಂಡು ಮಿಂಚಿದ್ದರು.

ಮಾದನಾಯಕನಹಳ್ಳಿ ಯಲ್ಲಿರುವ ಟಾಟಾ ನ್ಯೂ ಹೆವೆನ್ ಅಪಾರ್ಟ್ಮೆಂಟ್ ನ‌ಲ್ಲಿ ಗುರುಪ್ರಸಾದ್‌ ವಾಸವಿದ್ದರು. ಅವರ ಕೊಠಡಿಯಲ್ಲೇ ಫ್ಯಾನ್ ಗೆ ನೇಣು ಬಿಗಿದುಕೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಭಾನುವಾರ ಬೆಳಗ್ಗೆ ಕೆಟ್ಟ ವಾಸನೆ ಬರುವುದನ್ನು ನೋಡಿ ಅಕ್ಕಪಕ್ಕದ ನಿವಾಸಿಗಳು‌ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಮಾದನಾಯಕನಹಳ್ಳಿ‌ ಪೊಲೀಸರು ಬಾಗಿಲನ್ನು ಮೀಟಿ ತೆಗೆದು ಒಳಹೋಗಿದ್ದಾರೆ.

ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಸುಮಾರು ಎರಡು,ಮೂರು ದಿನಗಳ ಹಿಂದೆಯೇ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಗುರುಪ್ರಸಾದ್ ಎರಡನೆ‌ ಮದುವೆ ಮಾಡಿಕೊಂಡಿದ್ದರು ಆದರೂ ಅವರ ವೈವಾಹಿಕ ಜೀವನ ಚನ್ನಾಗಿರಲಿಲ್ಲ‌ ಎಂದು ಅವರನ್ನು ಬಲ್ಲವರು ಹೇಳಿದ್ದಾರೆ.ಜತೆಗೆ ಅವರಿಗೆ ಬಹಳ ಕುಡಿತದ ಚಟ ಇತ್ತು ಎಂದು ಕೂಡಾ ತಿಳಿಸಿದ್ದಾರೆ.

ರಾಮನಗರದ ಕನಕಪುರದಲ್ಲಿ 1972 ನವೆಂಬರ್ 2 ರಂದು ಗುರುಪ್ರಸಾದ್ ಜನಿಸಿದ್ದರು. ನಿನ್ನೆ ಅವರ ಹುಟ್ಟುಹಬ್ಬ,ಇಂದು ಡೆತ್ ಡೆ ಆಚಿರಸಬೇಕಿರುವುದು ನಿಜಕ್ಕೂ ದುರಂತ.

ಗುರು ಪ್ರತಿಭಾನ್ವಿತ‌ ನಿರ್ಧೇಶಕರಾಗಿದ್ದರು.
ಅವರು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅವರ ಸಮೀಪ ವರ್ತಿಗಳು ಅಭಿಪ್ರಾಯ ಪಟ್ಟಿದ್ದಾರೆ.