ಲೋಕಾಯುಕ್ತ ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೇನೆ:ಸಿದ್ದು

ಮೈಸೂರು: ಮೂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ಹಲವಾರು ಪ್ರಶ್ನೆ ಕೇಳಿದ್ದು

ಅವರು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ನಾನು ಉತ್ತರ ಕೊಟ್ಟಿದ್ದೇನೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಲೋಕಾಯುಕ್ತ ಕಚೇರಿಯಲ್ಲಿ ವಿಚಾರಣೆ ಎದುರಿಸಿ ಹೊರಬಂದ ನಂತರ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಿಎಂ ಮಾತನಾಡಿದರು.

ಪ್ರಶ್ನೆ,ಉತ್ತರ ಎಲ್ಲವನ್ನೂ ಅಧಿಕಾರಿಗಳು ರೆಕಾರ್ಡ್ ಮಾಡಿದ್ದಾರೆ ಎಂದು ಹೇಳಿದರು.

ಸುಳ್ಳು ಕೇಸ್ ಹಾಕಿದ್ದಾರೆ ವಿಚಾರಣೆ ಮಾಡಿದ್ದಾರೆ,ಇದರಲ್ಲಿ ನನಗೆ ಏಕೆ ಮುಜುಗರ ಆಗಲಿದೆ ಎಂದು ಮಾಧ್ಯಮದವರನ್ನೆ ಪ್ರಶ್ನಿಸಿದರು.

ಮತ್ತೆ ವಿಚಾರಣೆಗೆ ಬರುವಿರಾ ಎಂಬ ಪ್ರಶ್ನೆಗೆ ಲೋಕಾಯುಕ್ತ ಅಧಿಕಾರಿಗಳು ಮತ್ತೆ ವಿಚಾರಣೆ ಬರಲು ನನಗೆ ಹೇಳಿಲ್ಲ ಹಾಗಾಗಿ ಬರುವ ಪ್ರಮೇಯ ಬರಲಾರದು ಎಂದು ಸಿದ್ದು ಉತ್ತರಿಸಿದರು.

ಸ್ನೇಹಿತಮಹಿ ಕೃಷ್ಣ ಏನು ದೂರು ನೀಡಿದ್ದಾರೊ ಅದಕ್ಕಾಗಿ ನನ್ನ ವಿಚಾರಣೆಗೆ ಕರೆದಿದ್ದಾರೆ,ನಾನು ವಿಚಾರಣೆ ಎದುರಿಸಿದ್ದೇನೆ ಎಂದು ಹೇಳಿದರು.

ಬಿಜೆಪಿ ಅವರು ಗೋ ಬ್ಯಾಕ್ ಹೋರಾಟ‌ ಮಾಡಿದರಲ್ಲಾ ಎಂಬ ಪ್ರಶ್ನೆಗೆ, ಏನು

ಹಾಗಿದ್ರೆ ಬಿಜೆಪಿಯವರು ತನಿಖೆಗೆ ವಿರುದ್ಧ ಆಗಿದ್ದಾರಾ,ತನಿಖೆ ಆಗಬಾರದು ಅಂತಾ ಇದ್ದಾರಾ ಅವರು.ಅಂದರೆ ಅವರು ಸುಳ್ಳು ಆರೋಪ ಮಾಡಿದ್ದಾರೆ ಎಂದರ್ಥ ಎಂದು ಸಿದ್ದರಾಮಯ್ಯ ತಿಳಿಸಿದರು.

ಲೋಕಾಯುಕ್ತ ಬೇಡಾ ಸಿಬಿಐಗೆ ನೀಡಿ ಎಂದು ಬಿಜೆಪಿಯವರು ಕೇಳಿದ್ದಾರಲ್ಲಾ ಎಂಬ ಪ್ರಶ್ನೆಗೆ,ಬಿಜೆಪಿ ಯವರು ಯಾವ ಪ್ರಕರಣವನ್ನು ಸಿಬಿಐಗೆ ಕೊಟ್ಟಿದ್ದಾರೆ, ಲೋಕಾಯುಕ್ತ ಮಾಡಿರೋರು ಯಾರು ಎಂದು ಸಿಎಂ ಕೇಳಿದರು.

ಲೋಕಾಯುಕ್ತ ಸ್ವತಂತ್ರವಾಗಿರುವ ಸಂಸ್ಥೆ. ಸ್ವತಂತ್ರವಾಗಿ ತನಿಖೆ ಮಾಡುವ ಸಂಸ್ಥೆ.

ಬಿಜೆಪಿ ಅವರಿಗೆ ಕಾನೂನಿನ ಮೇಲೆ ಗೌರವವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಅವರು ಕೇಳಿದ್ದಕ್ಕೆ ಉತ್ತರ ಕೊಡಬೇಕು ಅನ್ನೋದು ಏನಿದೆ.ರಾಜ್ಯಪಾಲರು ಯಾರಿಂದ ತನಿಖೆ ಮಾಡಬೇಕೆಂದು ಹೇಳಿದ್ದಾರೆ, ಲೋಕಾಯುಕ್ತದಿಂದ ತಾನೆ,ತನಿಖೆ ಅದರಂತೆ ತನಿಖೆ ಆಗಿದೆ ಎಂದು ಟಾಂಗ್ ನೀಡಿದರು.

ಸೈಟ್ ವಿಚಾರ ಎಲ್ಲಾವೂ ಕಾನೂನು ಪ್ರಕಾರವೇ ನಡೆದಿದೆ. ಬಿಜೆಪಿ ಜೆಡಿಎಸ್‌ ನವರು ಸುಳ್ಳು ಆರೋಪ ಮಾಡಿದ್ದಾರೆ.

ನಾವು ಸೈಟ್ ವಾಪಸ್ಸು ನೀಡಿರೋದು ತಪ್ಪು ಮಾಡಿದ್ದೇವೆ ಅಂತಾ ಅಲ್ಲ.

ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ  ಅಂತಾ ನನ್ನ ಪತ್ನಿ ತೀರ್ಮಾನ ತಗೊಂಡಿರೋದು ಎಂದು ಹೇಳಿದರು.

ಈ ಕೇಸ್‌ಗಳನ್ನು ನಮ್ಮ ಬಳಿ ಇರುವ ಲಾಯರ್‌ಗಳು ಫೇಸ್ ಮಾಡ್ತಾರೆ.

ಸುಳ್ಳು ಆರೋಪಗಳು ಬಂದಾಗ ವಿಚಾರಣೆಗೆ ಹಾಜರಾಗಬೇಕಾಗಿದೆ.

ನನ್ನ ಬಳಿ ಯಾವುದೇ ಡಾಕ್ಯುಮೆಂಟ್ ಇಲ್ಲ. ಇದು ನನಗೆ ಸಂಬಂಧವೇ ಇಲ್ಲ.

ಕೋರ್ಟ್‌ನಲ್ಲಿ ತೀರ್ಮಾನ ಆಗುವವರೆಗೆ ಅದು ಆರೋಪ ಅಷ್ಟೇ

ಇದು ನನಗೆ ಕಪ್ಪು ಮಸಿ ಅಲ್ಲ, ಆರೋಪ ಅಷ್ಟೇ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.