ಹಾಸನ: ಹಾಸನದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗಿ ನಡೆಯುತ್ತಿರುವ ಅಪರಾಧ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೆÇಲೀಸರು ಮುಂದಾಗಿದ್ದಾರೆ.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ ಅವರು, ಜಿಲ್ಲೆಯಲ್ಲಿ ನಡೆಯುತ್ತಿರುವ ಕೊಲೆ, ಸುಲಿಗೆ ಪ್ರಕರಣಗಳನ್ನು ತಡೆಗಟ್ಟಲು ಪೊಲೀಸರಿಗೆ ನಿರ್ದೇಶನ ನೀಡುವ ಮೂಲಕ ಇಲಾಖೆಯ ವ್ಯವಸ್ಥೆಗೆ ಚುರುಕು ಮುಟ್ಟಿಸಿದರು.
ಪೆÇಲೀಸ್ ಕಚೇರಿ ಸಂಕೀರ್ಣ ಭವನದಲ್ಲಿ ರಾತ್ರಿ ಹಾಸನ ನಗರ, ಗ್ರಾಮಾಂತರ ಮತ್ತು ಸಂಚಾರಿ ಪೆÇಲೀಸರಿಗೆ ಎಸ್ ಪಿ ಅವರು ಅಪರಾಧ ಮಾಡುವವರ ಸದೆಬಡಿಯಲು ಕೆಲ ಸಲಹೆ, ಸೂಚನೆಗಳನ್ನು ನೀಡಿದರು.
ರಾತ್ರಿ ಹೊತ್ತು ಕೆಲ ಪುಂಡರು ಮನೆಗಳ್ಳತನ, ಕೊಲೆ ಪ್ರಕರಣ, ಅತ್ಯಾಚಾರ ಪ್ರಕರಣಗಳಂತಹ ಕೃತ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಪ್ರತಿಯೊಬ್ಬ ಪೆÇಲೀಸ್ ಸಿಬ್ಬಂದಿ ತಮ್ಮ ಬೀಟ್ ವ್ಯಾಪ್ತಿಯಲ್ಲಿ ಸಂಚರಿಸುವ ಅನುಮಾನಾಸ್ಪದ ವಾಹನಗಳನ್ನು ಮತ್ತು ವ್ಯಕ್ತಿಗಳನ್ನು ತಪಾಸಣೆ ಮಾಡಿ ಸೂಕ್ತ ಮಾಹಿತಿ ಕಲೆಹಾಕಬೇಕು. ಇದರಿಂದ ಜಿಲ್ಲೆಯಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿಮಗೆ ಕೆಲವು ಮಾಹಿತಿಗಳು ಸಿಗಬಹುದು ಎಂದು ತಿಳಿಸಿದರು.
ಸ್ಥಳದಲ್ಲಿ ನಡೆದ ಕೃತ್ಯ ಅಥವಾ ಇತರೆ ಪ್ರಕರಣಗಳ ಬಗ್ಗೆ ತಕ್ಷಣ ಮಾಹಿತಿ ನೀಡಲು ವಾಕಿ ಟಾಕಿ ಬಳಸಲು ಎಸ್ಪಿ ಅವರು ಸೂಚಿಸಿದರು.
ನಾಲ್ಕಕ್ಕಿಂತ ಹೆಚ್ಚು ಮಂದಿ ಇರುವುದು ಕಂಡುಬಂದರೆ ಅಂಥವರನ್ನು ವಿಚಾರಣೆಗೊಳಪಡಿಸಬೇಕೆಂದು ತಿಳಿಸಿದರು.
ರಾತ್ರಿ ಹತ್ತು ಗಂಟೆ ನಂತರ ಮಹಿಳೆಯರು ಒಂಟಿಯಾಗಿ ಹೋಗುವ ಸಂದರ್ಭದಲ್ಲಿ ಅವರನ್ನು ವಿಚಾರಿಸಿ ಅವರಿಗೆ ನೆರವಾಗುವಂತೆ ಎಸ್ಪಿ ಹೇಳಿದರು.