ನಾಳೆಯ ಬಂದ್ ಗೆ ರೈತರು ಕರೆ ಕೊಟ್ಟಿಲ್ಲ -ಸಚಿವ ಎಸ್.ಟಿ.ಎಸ್.

ಮೈಸೂರು, ಸೆ. 27- ನಾಳೆಯ ಬಂದ್ ಗೆ ರೈತರು ಕರೆ ಕೊಟ್ಟಿಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು.
ನಗರದಲ್ಲಿ ಭಾನುವಾರ ಸಚಿವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ನಾಳೆಯ ಬಂದ್ ಗೆ ರೈತರು ಕರೆ ಕೊಟ್ಟಿಲ್ಲ. ಕೆಲವು ಸಂಘಟನೆಗಳು ಬಂದ್ ಗೆ ಕರೆ ಕೊಟ್ಟಿವೆ ಎಂದರು.
ಎಪಿಎಂಸಿ ತಿದ್ಧುಪಡಿ ಕಾಯ್ದೆ ಕುರಿತು ರೈತರ ವಿರೋಧ ಇಲ್ಲ. ರೈತ ಮುಖಂಡರಿಗೆ ಇದರ ಬಗ್ಗೆ ವಿರೋಧವಿದೆ ಎಂದವರು ತಿಳಿಸಿದರು.
ರಾಜಕಾರಣಕ್ಕಾಗಿ ತಿದ್ದುಪಡಿ ಕಾಯ್ದೆ ವಿರೋಧ ಮಾಡಲಾಗುತ್ತಿದೆ ಎಂದು ಅವರು ದೂರಿದರು.
ಕಾಯ್ದೆಯಿಂದ ರೈತರಿಗೆ ಅನಕೂಲವಾಗಲಿದೆ ಎಂದು ಸಚಿವ ಎಸ್.ಟಿ.ಎಸ್. ಹೇಳಿದರು.
ಸಿದ್ದರಾಮಯ್ಯ ಅವರು ಕಾಟಚಾರಕ್ಕೆ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದಾರೆ. ಆ ಅವಿಶ್ವಾಸ ನಿರ್ಣಯ ಮಂಡನೆಗೆ ಯಾವುದೇ ಬೆಲೆ ಇಲ್ಲ ಎಂದು ಸಚಿವ ಸೋಮಶೇಖರ್ ಸಿದ್ದುಗೆ ಟಾಂಗ್ ನೀಡಿದರು.