ಸೋಮವಾರ ‘ಕರ್ನಾಟಕ ಬಂದ್’

ಬೆಂಗಳೂರು: ಕೃಷಿ ಮಸೂದೆ ವಿಚಾರ ಸರ್ಕಾರದ ವಿರುದ್ಧ ರೈತಪರ ಸಂಘಟನೆಗಳು ಸೆ. 28ರಂದು ಕರ್ನಾಟಕ ಬಂದ್ ಗೆ ಕರೆ ನೀಡಿವೆ.
ಬಂದ್ ಗೆ ಬಹುತೇಕ ಸಂಘಟನೆಗಳು ಬೆಂಬಲ ನೀಡಿವೆ. ಹಾಗಾಗಿ ಸೋಮವಾರ ರಾಜ್ಯದಲ್ಲಿ ಜನಜೀವನ ಮೇಲೆ ಪರಿಣಾಮ ಬೀರಲಿದೆ.
ರೈತ ಸಂಘಟನೆಗಳಿಗೆ ಹತ್ತು ಹಲವು ಸಂಘಟನೆಗಳು ಬೆಂಬಲ ಸಹ ಬೆಂಬಲ ನೀಡಿವೆ. ಕೆಲ ಸಂಘಟನೆಗಳು ನೈತಿಕ ಬೆಂಬಲ ಕೊಟ್ಟಿವೆ.
ಹಾಲು, ಪೇಪರ್, ಹಣ್ಣು, ತರಕಾರಿ, ಆಸ್ಪತ್ರೆ, ಮೆಡಿಕಲ್ ಸೇವೆಗಳು ಎಂದಿನಂತೆ ಇರಲಿವೆ.
ಪೆಟ್ರೋಲ್ ಬಂಕ್ ಮಾಲೀಕರು ನೈತಿಕವಾಗಿ ಬಂದ್‍ಗೆ ಬೆಂಬಲ ನೀಡಿದ್ದು, ಪೆಟ್ರೋಲ್ ಬಂಕ್ ತೆರೆದರುತ್ತವೆ.
ಕೆಎಸ್‍ಆರ್‍ಟಿಸಿ, ಬಿಎಂಟಿಸಿ, ಮೆಟ್ರೋ, ವಿಮಾನ, ರೈಲು ಸಂಚಾರದಲ್ಲಿ ವ್ಯತ್ಯಯ ಇಲ್ಲ.
ಹೋಟೆಲ್ ಮಾಲೀಕರು ನೈತಿಕ ಬೆಂಬಲ ನೀಡಿದ್ದಾರೆ. ಹೋಟೆಲ್‍ಗಳು ರಾಜ್ಯಾದ್ಯಂತ ತೆರೆದಿರುತ್ತದೆ.
ನಾಳೆ ಓಲಾ-ಉಬರ್ ಸೇವೆ ಇರುವುದಿಲ್ಲ. ಆಟೋ-ಟ್ಯಾಕ್ಸಿಗಳು ಸಹ ರಸ್ತೆಗಿಳಿಯೊದಿಲ್ಲ. ಖಾಸಗಿ ಬಸ್ ಸೇವೆ ಸೋಮವಾರ ಇರಲ್ಲ.
ಸೆ. 28ರ ಬೆಳಗ್ಗೆ 6 ಗಂಟೆಯಿಂದ ಸಂಜೆ 6ಗಂಟೆವರೆಗೂ ಕರ್ನಾಟಕದಲ್ಲಿ ಬಂದ್ ಆಗಲಿದೆ ಎಂದು ರೈತ ಸಂಘದ ಮುಖಂಡರು ತಿಳಿಸಿದ್ದಾರೆ.