ಇಂದು ವಿಶ್ವ ಪ್ರವಾಸೋದ್ಯಮ ದಿನ: Feel Good

ಡಾ.ಗುರುಪ್ರಸಾದ ಎಚ್ ಎಸ್
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com
ಈ ವರ್ಷ ಕೊರೊನಾ ಕೊಟ್ಟ ಹೊಡೆತಕ್ಕೆ ಇಡೀ ಜಗತ್ತೇ ತತ್ತರಿಸಿ ಹೋಗಿದೆ.
ಜನರು ಆರ್ಥಿಕ ಸಂಕಷ್ಟಕ್ಕೆ ಈಡಾಗಿ ಪ್ರವಾಸ ಮಾಡಬೇಕೆನ್ನುವ ಅಸೆ ಕಮರಿ ಹೊಗಿರುವ ಕಾಲಘಟ್ಟದಲ್ಲಿ ಇಂದು ವಿಶ್ವ ಪ್ರವಾಸೋದ್ಯಮ ದಿನ ದಿನಾಚರಣೆ ಆಚರಿಸುತ್ತಿದ್ದೇವೆ.
ಪ್ರತಿವರ್ಷ ಭಾರತಕ್ಕೆ ಭೇಟಿ ನೀಡುತ್ತಿದ್ದ ಪ್ರವಾಸಿಗರ ಸಂಖ್ಯೆ 25 ಲಕ್ಷದಷ್ಟು ಆಗಿದೆ.
ಈ ವರ್ಷದ ವಿಶ್ವ ಪ್ರವಾಸೋದ್ಯಮ ದಿನಾಚರಣೆ 2020ರ ಥೀಮ್- ‘ಶಾಂತಿಯನ್ನು ನಿರ್ಮಿಸೋಣ! ಜ್ಞಾನವನ್ನು ಬೆಳೆಸೋಣ’ ಎಂಬ ಧ್ಯೇಯದೊಂದಿಗೆ ಆಚರಿಸಲಾಗುತ್ತಿದೆ.
ಭಾರತದಲ್ಲಿ 1970ರ ದಶಕದ ನಂತರ ಪ್ರವಾಸೋದ್ಯಮ ಹೊಸ ಚಾಲನೆ ಪಡೆದುಕೊಂಡಿತು.
1982ರಲ್ಲಿ ಪ್ರವಾಸೋದ್ಯಮಕ್ಕಾಗಿಯೇ ರಾಷ್ಟ್ರೀಯ ನೀತಿಯನ್ನು ಪ್ರಕಟಿಸಲಾಯಿತು.
1988ರಲ್ಲಿ ರಾಷ್ಟ್ರೀಯ ಪ್ರವಾಸೋದ್ಯಮ ಸಮಿತಿಯನ್ನು ರಚಿಸಿ ನೀರಿಕ್ಷೆ ಗುರಿ ತಲುಪುವ ಯೋಜನೆ ಹಮ್ಮಿಕೊಳ್ಳಲಾಯಿತು. 1992ರಲ್ಲಿ ರಾಷ್ಟ್ರೀಯ ಕ್ರಮ ಯೋಜನೆ ಮತ್ತು 1996ರಲ್ಲಿ ರಾಷ್ಟ್ರೀಯ ಯೋಜನೆಗಳು ಜಾರಿಗೊಂಡವು.
ಇದಕ್ಕೂ ಮುನ್ನ 1966ರಲ್ಲಿ ಇಂಡಿಯಾ ಟೂರಿಸಂ ಡೆವಲಪ್‍ಮೆಂಟ್ ಕಾಪೆರ್Çೀರೇಷನ್ ಮತ್ತು 1989ರಲ್ಲಿ ಟೂರಿಸಂ ಫೈನಾನ್ಸ್ ಕಾಪೆರ್Çೀರೇಷನ್‍ಗಳನ್ನು ಸ್ಥಾಪಿಸಿದ್ದು ಮಹತ್ವದ ಮೈಲುಗಲ್ಲುಗಳಾಗಿದ್ದವು.
ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಈ ಉದ್ಯಮಕ್ಕೆ ಸಂಬಂಧಿಸಿದಂತೆ ಭಾರತ ದುಸ್ಥಿತಿಯಲ್ಲಿದೆ.
ನಮ್ಮ ಭಾರತ ವಿಶ್ವದಾದ್ಯಂತ ಎಲ್ಲ ರಾಷ್ಟ್ರಗಳ ಪ್ರವಾಸಿಗರನ್ನು ಕೈಬಿಸಿ ಕರೆಯುತ್ತಿದೆ.
ಭಾರತೀಯರ ಜೀವನ ಶೈಲಿ, ಕಲೆ-ಸಾಂಸ್ಕøತಿಕ ಚರಿತ್ರೆ, ರಂಗುರಂಗಿನ ಜಾತ್ರೆಗಳು, ಉತ್ಸವಗಳು ಇವೆಲ್ಲ ಹೊರನಾಡಿನವರನ್ನು ಆಕರ್ಷಿಸುತ್ತದೆ.
ಸುಂದರ ಕಡಲತೀರಗಳು, ಅಭಯಾರಣ್ಯಗಳು, ಕಾಡು ಪ್ರಾಣಿಗಳು, ಹಿಮ, ನದಿ, ಪರ್ವತ ಶ್ರೇಣಿಗಳು, ಪಾರಂಒರಿಕ ಕಟ್ಟಡಗಳು, ದೇಗುಲಗಳು, ತಂತ್ರಜ್ಞಾನ ಮೆಚ್ಚಿನ ತಾಣವಾಗಿವೆ.
ಭಾರತೀಯರ ಕರಕುಶಲತೆ ಅದರಲ್ಲೂ ವಿಶೇಷವಾಗಿ ಆಭರಣಗಳು, ನೆಲಹಾಸು, ಚರ್ಮದ ಉತ್ಪಾದನೆಗಳು, ಆನೆದಂತ, ಕುಸುರಿ ಕೆಲಸಗಳು ಇತ್ಯಾದಿ ವಿದೇಶಿ ಪ್ರವಾಸಿಗರ ನೆಚ್ಚಿನ ಶಾಪಿಂಗ್ ವಸ್ತುಗಳಾಗಿವೆ.
ಸಮಿಕ್ಷೆಯೊಂದರ ಪ್ರಕಾರ ನಮ್ಮ ಪ್ರವಾಸ ಖರೀದಿಯ ಶೇ. 40ರಷ್ಟು ಆದಾಯ ಈ ವಸ್ತುಗಳಿಂದ ಬರುತ್ತಿದೆ.
ಒಂದು ರಾಜ್ಯ, ಹಲವು ಜಗತ್ತು – ಧ್ಯೇಯದ ಅಡಿಯಲ್ಲಿ ಇಂದು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಕಾರ್ಯನಿರ್ವಹಿಸುತ್ತಿದೆ.
ಬೇರೆ ರಾಜ್ಯಗಳಿಗೆ ಹೊಲಿಸಿದರೆ ಕರ್ನಾಟಕವು ಪ್ರವಾಸೋದ್ಯಮದಲ್ಲಿ ಮಂದಗತಿಯಲ್ಲಿ ಮುನ್ನುಗ್ಗುತ್ತಿದೆ. ಇವಕ್ಕೆಲ್ಲ ಹಲವಾರು ಕಾರಣಗಳು ಇವೆ.
ಗಾತ್ರದಲ್ಲಿ ಚಿಕ್ಕದಾದರೂ ನೆರೆಯ ಗೋವಾ ಮತ್ತು ಕೇರಳ ರಾಜ್ಯಗಳು ಅತಿಹೆಚ್ಚು ಪ್ರವಾಸಿಗರನ್ನು ಆಕರ್ಶಿಸಿ ತಮ್ಮ ಖಜಾನೆಯನ್ನು ಭರ್ತಿ ಮಾಡಿಕೊಳ್ಳುತ್ತಿವೆ.
ಪ್ರವಾಸಿ ತಾಣಗಳಿಗೆ ತಲುಪಲು ಸರಿಯಾದ ರಸ್ತೆ ಸಂಪರ್ಕವಿಲ್ಲದಿರುವುದು ಮತ್ತು ಪ್ರವಾಸಿಗಳು ತಂಗಲು ಸರಿಯಾದ ಊಟ ಹಾಗೂ ವಸತಿ ಸೌಕರ್ಯವಿಲ್ಲದಿರುವುದು ಇದ್ದರೂ ಅತಿ ಹೆಚ್ಚು ಹಣ ವಸೂಲಿ ಮಾಡುವುದು ಇದಕ್ಕೆ ಮುಖ್ಯ ಕಾರಣಗಳು.
ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ ತಂಗಲು ಉತ್ತಮ ವಸತಿ ಸೌಕರ್ಯವಿಲ್ಲದಿರುವುದು ಅತ್ಯಂತ ದುರದೃಷ್ಟಕರ.
ಬೆಂಗಳೂರು ಮತ್ತು ಮೈಸೂರು ನಗರಗಳಿಗಿರುವ ಸೌಲಭ್ಯಗಳು ಇತರೆ ನಗರಗಳಲ್ಲಿ ಇಲ್ಲ. ಮದುವೆಯಾದ ನವ ದಂಪತಿಗಳಿಗೆ ನೀವು ಮಧು ಚಂದ್ರಕ್ಕೆ ಎಲ್ಲಿಗೆ ಹೋಗುತ್ತಿರಾ ಅಂತ ಕೇಳಿದರೆ ಊಟಿ, ಕೊಡೈಕೆನಾಲ್ ಹೆಸರು ಹೇಳುತ್ತಾರೆ. ಅದಕ್ಕಿಂತ ಉತ್ತಮ ಪ್ರದೇಶಗಳಾದ ಕೆಮ್ಮಣ್ಣು ಗುಂಡಿ, ಕುದುರೆಮುಖ, ಕೊಡಗು, ನಂದಿ ಬೆಟ್ಟ, ಸಕಲೆಶಪುರ ಮುಂತಾದ ಗಿರಿಧಾಮಗಳನ್ನು ಯಾರು ಹೆಸರಿಸುವುದಿಲ್ಲ, ಮೂಲಭೂತ ಸೌಕರ್ಯಗಳ ಕೊರತೆಯೇ ಮುಖ್ಯ ಕಾರಣವಾಗಿದೆ.
ವಿದೇಶಿ ಪ್ರವಾಸಿಗರಿಗೆ ರಕ್ಷಣೆ ಅಗತ್ಯ. ವಿದೇಶಿ ಪ್ರವಾಸಗರಿಗೆ ಕೀಟಲೆ ಕೊಡುವ ಸ್ವಭಾವ ಇಂದು ನಮ್ಮವರಲ್ಲಿ ಜಾಸ್ತಿಯಾಗಿದೆ. ಇದು ನಮ್ಮ ಭವ್ಯ ಸಂಸ್ಕøತಿಗೆ ಮಸಿ ಬಳಿಯುವ ಸಂಗತಿ ಕೂಡಾ. ಇಲ್ಲಿ ಅತಿಥಿಗಳಿಗೆ ರಕ್ಷಣೆ ಕೊಡುವುದಕ್ಕಿಂತ ಅವರಿಂದ ಭಕ್ಷಣೆಗಾಗಿ ಹುಡುಕಾಡುವವರೇ ಜಾಸ್ತಿ. ಅವರಿಂದ ಹಣ ಹಾಗೂ ಅಮೂಲ್ಯ ವಸ್ತುಗಳನ್ನು ಲಪಟಾಯಿಸುವ ಕಾರ್ಯ ನಮ್ಮವರಿಂದಲೇ ನಡೆಯುತ್ತಿದೆ.
ವಿದೇಶಿ ಪ್ರವಾಸಿಗರ ಹತ್ಯೆ, ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಕಡಿಮೆಯೇನಿಲ್ಲ. ಇಂಥ ಕೃತ್ಯಗಳಲ್ಲಿ ತೊಡಗಿಕೊಳ್ಳುವ ಕೆಲವು ಅದಮರಿಂದಾಗಿ ಇಡೀ ಪ್ರವಾಸೋದ್ಯಮ ಕ್ಷೇತ್ರ ಹಾಳಾಗುತ್ತಿದೆ.
ಇಂಥ ಅಮಾನವೀಯ ಕೃತ್ಯಗಳನ್ನು ತಡೆಯುವಂಥ ಕಾರ್ಯ ಇಲ್ಲಿ ಆಗಬೇಕಾದ್ದು ಅಗತ್ಯ.
ಪ್ರವಾಸಿ ವೀಸಾ ನೀತಿಯಲ್ಲಿ ಸಡಿಲಿಕೆ, 2 ಮತ್ತು 3ನೇ ದರ್ಜೆಯ ನಗರದಲ್ಲಿ ವಸತಿ, ಸಾರಿಗೆ ಹಾಗೂ ರಸ್ತೆಗಳ, ಸುರಕ್ಷತೆ, ಮಹಿಳಾ ಪ್ರವಾಸಿಗಳ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡುವುದು. ಸ್ವಚ್ಛತೆ ಮತ್ತು ಇತರೆ ಮೂಲಭೂತ ಸೌಕರ್ಯಗಳು ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು. ಪ್ರವಾಸಿ ತಾಣಗಳಿಗೆ ರಾಷ್ಟ್ರೀಯ ಹೆದ್ದಾರಿಗಳ ಸಂಪರ್ಕ ಕಲ್ಪಿಸುವುದು. ಭಾಷಾ ಅನುವಾದಕರ ಕೊರತೆಯನ್ನು ನೀಗಿಸುವುದು. ಸೇವಾ ತೆರಿಗೆ. ಲುಕ್ಷರಿ ತೆರಿಗೆ, ಮೊನೋರಂಜನ ತೆರಿಗೆ, ಜಿಎಸ್ ಟಿ, ಮಾರಾಟ ತೆರಿಗೆಗಳಿಂದ ರಿಯಯಾಯಿತಿ ಕೊಡುವುದು. ಪ್ರವಾಸೋದ್ಯಮದ ಶಿಕ್ಷಣ ಕೇಂದ್ರಗಳನ್ನು ಆರಂಭಿಸುವುದು. ತಂತ್ರಜ್ಞಾನ ಬಳಕೆ ಇವೆಲ್ಲವೂ ಇಂದು ಪ್ರವಾಸೋದ್ಯಮದಲ್ಲಿರುವ ಸವಾಲುಗಳಾಗಿವೆ.
ಪ್ರವಾಸಕ್ಕೆ ಬರುವ ದೇಶೀಯ ಮತ್ತು ವಿದೇಶಿ ಪ್ರವಾಸಿಗರಿಂದ ಹಣವು ಸಹ ಯೆತೆಚ್ಚವಾಗಿ ಹರಿದುಬರುತ್ತದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಿರಂತರ ಅದಾಯವೂ ಸಹ ಬರುತ್ತದೆ. ಇಂದು ಭಾರತದಲ್ಲಿ ಪ್ರವಾಸೋದ್ಯಮವು ಸುಮಾರು 20 ಲಕ್ಷ ಜನರಿಗೆ ಉದ್ಯೋಗ ನೀಡಿದೆ. ಇಂದೊಂದು ಉತ್ತಮ ಬೆಳವಣಿಗೆ.
ಭಾರತದ ಪ್ರಾಚೀನ ಪದ್ಧತಿಗಳಾದ ಆಯುರ್ವೇದ ಮತ್ತು ಯೋಗ ಚಿಕಿತ್ಸೆಗಳಿಗೆ ವಿದೇಶಿಯರಲ್ಲದೆ ಸ್ವದೇಶಿಯರು ಸಹ ಮುಗಿಬಿದ್ದಿರುವುದು ವ್ಯದ್ಯಕೀಯ ಪ್ರವಾಸೋದ್ಯಮಕ್ಕೆ ವರದಾನವಾಗಿದೆ.
ವ್ಯದ್ಯಕೀಯ ಪ್ರವಾಸೋದ್ಯಮವು ವರ್ಷದಿಂದ ವರ್ಷಕ್ಕೆ ಶೇ. 30ರಷ್ಟು ವೇಗದಲ್ಲಿ ಬೆಳವಣಿಗೆ ಹೊಂದುತ್ತಿದೆ. 2015ರ ಹೊತ್ತಿಗೆ ಸುಮಾರು 2 ಬಿಲಿಯನ್ ಡಾಲರ್ ವರಮಾನವನ್ನು ಮೀರುವ ಸಾಧ್ಯತೆಯಿದೆ ಎಂಬ ನಿರೀಕ್ಷೆಯಿದೆ.
ಪ್ರವಾಸೋದ್ಯಮದಿಂದ ಸಾರಿಗೆ, ಹೊಟೇಲ್ ಉದ್ಯಮಕ್ಕೆ ನೇರ ಲಾಭ ತರುವುದರಿಂದ ಅಲ್ಲಿ ಹೆಚ್ಚು ಉದ್ಯೋಗವಕಾಶಗಳು ಸೃಷ್ಟಿಯಾಗುತ್ತದೆ.
ಹಿಂದೆ ಪ್ರವಾಸವನ್ನು ಕೇವಲ ಉಳ್ಳವರು ಮಾಡುತ್ತಿದ್ದರು ಹಾಗೂ ಸಾಮಾನ್ಯರ ಪ್ರವಾಸವೆಂದರೆ ತೀರ್ಥಯಾತ್ರೆಗಳಿಗೆ ಮಾತ್ರ ಮೀಸಲಾಗಿತ್ತು.
ಇಂದು ಬಡವ, ಶ್ರೀಮಂತರೆಂಬ ಭೇದ ಭಾವವಿಲ್ಲದೆ, ಶಾಲಾ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಪ್ರವಾಸ ಕೈಗೊಳ್ಳುತ್ತಾರೆ.
ಅವರಿಗೆ ಅನುಕೂಲಕ್ಕೆ ತಕ್ಕಂತೆ ಪ್ರವಾಸಗಳನ್ನು ಏರ್ಪಡಿಸುವ ಏಜೆನ್ಸೀಗಳು ದಿನ ನಿತ್ಯ ಹುಟ್ಟುತ್ತಲೆ ಇವೆ.
ಪ್ರವಾಸೋದ್ಯಮದಿಂದ ಬರುವ ಆದಾಯದಿಂದ ಸರ್ಕಾರವು ಪ್ರವಾಸಿ ಕೇಂದ್ರಗಳ ಮೂಲ ಭೂತ ಸೌಕರ್ಯಗಳ ಅಭಿವೃದ್ದಿಗೆ ಬಳಸಿ ಪ್ರವಾಸಿ ಕೇಂದ್ರಗಳಿಗೆ ಪ್ರವಾಸಿಗರನ್ನು ಸೆಳೆದು ಇನ್ನೂ ಹೆಚ್ಚು ಆದಾಯವನ್ನು ಗಳಿಸಬಹುದು.
ಜಗತ್ತಿನ ಇತರೆ ದೇಶಗಳಿಗೆ ಹೊಲಿಸಿದರೆ ಭಾರತದಲ್ಲಿ ಹಳ್ಳಿ ಮತ್ತು ಪಟ್ಟಣಗಳ ನಡುವಿನ ಜನಜೀವನ ಮಟ್ಟದ ಅಂತರ ಬಹಳವಿದೆ.
ಪ್ರವಾಸೋದ್ಯಮವು ಜನರು ಹಳ್ಳಿಗಳಿಂದ ನಗರಕ್ಕೆ ವಲಸೆ ಹೋಗುವುದನ್ನು ತಪ್ಪಿಸಿ ಅವರು ಇದ್ದಲ್ಲಿಯೇ ಉತ್ತಮ ಆದಾಯ ತರುವ ಮೂಲವಾಗುತ್ತದೆ. ಪ್ರವಾಸಕ್ಕೆ ಬರುವ ಪ್ರವಾಸಿಗರು ಹೆಚ್ಚಾದಂತೆ ವಿಶ್ವದಲ್ಲಿ ಭಾರತದ ಬಗ್ಗೆ ಇರುವ ಹಲವಾರು ತಪ್ಪು ತಿಳುವಳಿಕೆಗಳು ಇಲ್ಲವಾಗಿ ಫೀಲ್ ಗುಡ್ – ಫ್ಯಾಕ್ಟರ್ ಹೆಚ್ಚಾಗುತ್ತದೆ. ಪ್ರವಾಸೋದ್ಯಮವನ್ನು ವ್ಯವಸ್ಥಿತವಾಗಿ ಅಭಿವೃದ್ಧಿ ಪಡಿಸುವ ಮೂಲಕ ಬಡತನದ ಸಮಸ್ಯೆಯನ್ನು ನಿರ್ಮೂಲನೆ ಮಾಡಬಹುದು ಹಾಗೂ ನಮ್ಮ ದೇಶದ ಕೀರ್ತಿಯು ಸಹ ಉತ್ತುಂಗಕ್ಕೆ ಏರುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.