ಸಿಎಂಗೆ ಹೆಚ್ಚಿದ ದೈವ‌ ಭಕ್ತಿ‌:ತಾಯಿ‌ ಚಾಮುಂಡಿಗೆ ಚಿನ್ನದ ರಥ

ಮೈಸೂರು: ಇತ್ತೀಚೆಗೆ ಅತಿ ಹೆಚ್ಚು ವಿವಾದಗಳನ್ನು ಮೈಮೇಲೆ ಎಳೆದು ಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರು ಮನಃಶಾಂತಿಗೆ ದೈವದ ಮೊರೆ ಹೋಗುತ್ತಿದ್ದಾರೆ.

ಮುಡಾ ನಿವೇಶನ ವಿವಾದ,ವಾಲ್ಮೀಕಿ ಹಗರಣ ಹೀಗೆ ಒಂದಲ್ಲಾ ಒಂದು ವಿವಾದಗಳನ್ನು ಎದುರಿಸುತ್ತಿರುವ ಸಿದ್ದರಾಮಯ್ಯ ಅವರ ಮನಸ್ಸು ದೇವರ ಕಡೆ ವಾಲಿದೆ.

ಹಾಗಾಗಿಯೇ ಅವರು ತಾಯಿ ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ ನಿರ್ಮಾಣ ಮಾಡಿಸಲು ಉತ್ಸುಕರಾಗಿದ್ದಾರೆ.

ದೇವಿಗೆ ಚಿನ್ನದ ರಥ ನಿರ್ಮಾಣ ಮಾಡಿಸಬೇಕೆಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಸಿಎಂ ಗೆ ಮನವಿ ಸಲ್ಲಿಸಿದ್ದರು.

ಇದಕ್ಕೆ ಈಗ ಸ್ಪಂಸಿಸಿರುವ ಸಿದ್ದು, ಈ ಬಗ್ಗೆ ಪರಿಶೀಲಿಸಿ ಕೂಡಲೇ ಪ್ರಸ್ತಾವನೆ ಸಲ್ಲಿಸುವಂತೆ ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.

ನಾಡದೇವತೆ ತಾಯಿ ಚಾಮುಂಡೇಶ್ವರಿಗೆ 100 ಕೋಟಿ ವೆಚ್ಚದಲ್ಲಿ ಚಿನ್ನದ ರಥ ನಿರ್ಮಾಣ ಮಾಡಲು ಇಚ್ಚಿಸಿದ್ದಾರೆ.ಹಗರಣಗಳ ಸುಳಿ,ಬಿಜೆಪಿಗರ ಹೋರಾಟದಿಂದ ಬೇಸರಗೊಂಡಿರುವ ಸಿದ್ದರಾಮಯ್ಯ ಅವರು ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಯ ಮೊರೆ ಹೋಗಿದ್ದಾರೆ.ಹಾಗಾಗಿ ಹಲವು ಬಾರಿ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ,ಈಗ ಚಿನ್ನದ ರಥ ನಿರ್ಮಾಣಕ್ಕೂ ಉತ್ಸುಕರಾಗಿದ್ದಾರೆ.