ಜೆ ಎಸ್ ಎಸ್ ಪ್ರಾಯೋಗಿಕ ಪ್ರಾಥಮಿಕ ಶಾಲೆಯಲ್ಲೆ ಕಳೆಗಟ್ಟಿದ ಮಕ್ಕಳ ಸಂತೆ

ಮೈಸೂರು: ಸರಸ್ವತಿಪುರಂ ನಲ್ಲಿರುವ‌ ಜೆ ಎಸ್ ಎಸ್ ಪ್ರಾಯೋಗಿಕ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಲರವ,ಸಡಗರ, ಸಂಭ್ರಮ ಹೇಳತೀರದಾಗಿತ್ತು.

ಇದಕ್ಕೆ ಕಾರಣ ಮಕ್ಕಳೇ ಹಮ್ಮಿಕೊಂಡಿದ್ದ ಸಂತೆ, ಈ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಗುರುಸ್ವಾಮಿ ಎಮ್ ಭಾಗವಹಿಸಿ ಮಕ್ಕಳನ್ನು ಹುರಿದುಂಬಿಸಿದರು. ಜೊತೆಗೆ ಕ್ಯಾಂಪಸ್ ನ ಎಲ್ಲ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳು ಪಾಲ್ಗೊಂಡು ಮಕ್ಕಳ ಕಾರ್ಯವನ್ನು ಪ್ರೋತ್ಸಾಹಿಸಿದರು.  

ಮಕ್ಕಳಲ್ಲಿ ವ್ಯವಹಾರ ಕೌಶಲ್ಯ ಹಾಗೂ ವ್ಯವಹಾರ ಜ್ಞಾನವನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಈ ಸಂತೆ ಏರ್ಪಡಿಸಲಾಗಿತ್ತು.  ಮಕ್ಕಳು ಬಗೆ ಬಗೆಯ ತಿಂಡಿ ತಿನಿಸುಗಳನ್ನು ಮಾಡಿಕೊಂಡು ಬಂದು ಸಂತಸದಿಂದ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಪೋಷಕರು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಮಕ್ಕಳು ತಂದಿದ್ದ ತಿಂಡಿ,ತಿನಿಸು ವ್ಯಾಪಾರ ಮಾಡಿ ಮಕ್ಕಳನ್ನು ಹುರಿದುಂಬಿಸಿದರು. ಒಟ್ಟಾರೆ ಶಾಲೆಯಲ್ಲಿ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು.