ಮೈಸೂರು: ಮೈಸೂರು ದಸರಾ ವಸ್ತು ಪ್ರದರ್ಶನದ ಆವರಣದಲ್ಲಿರುವ ಶ್ರೀ ಸಾಂಬಸದಾಶಿವ ಮತ್ತು ಶ್ರೀ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಧಾತ್ರಿ ಹವನ ಹಮ್ಮಿಕೊಳ್ಳಲಾಯಿತು.
ಅವಧೂತ ಅರ್ಜುನ ಮಹಾರಾಜ್ ಅವರ ನೇತೃತ್ವದಲ್ಲಿ ಶ್ರೀ ವೀರಾಂಜನೇಯಸ್ವಾಮಿ ಸೇವಾ ಭಕ್ತ ಮಂಡಳಿ ವತಿಯಿಂದ ಕಾರ್ತಿಕ ಮಾಸದ ಪ್ರಯುಕ್ತ ವೇದಬಳಗ ಪುರೋಹಿತರಿಂದ ಧಾತ್ರಿಹವನ ಹೋಮ ಪೂರ್ಣಹುತಿ ನಡೆಯಿತು.
ನಂತರ ಭಕ್ತರಿಗೆ ವನಭೋಜನ ಏರ್ಪಡಿಸಿ ಅನ್ನಸಂತರ್ಪಣೆ ಮಾಡಲಾಯಿತು.ಸ್ವತಃ ಅರ್ಜುನ ಗುರುಜಿ ಅವರೇ ಭೋಜನ ಬಡಿಸಿದರು.
ಈ ವೇಳೆ ಅವಧೂತ ಅರ್ಜುನ ಗುರೂಜಿ ರವರು ಮಾತನಾಡಿ ಕಾರ್ತಿಕ ಮಾಸದಲ್ಲಿ ಧಾತ್ರಿ ಹವನ ಮಾಡಿ ಅನ್ನಸಂತರ್ಪಣೆ ಮಾಡಿದರೆ ಮನುಷ್ಯನಿಗೆ ಶ್ರೇಯಸ್ಸು ಆರೋಗ್ಯ ದೊರೆಯುತ್ತದೆ ಎಂದು ತಿಳಿಸಿದರು.
ಬೆಳಗಿನ ಹೊತ್ತು ಪರಿಸರದಲ್ಲಿ ಧ್ಯಾನ, ನಿರ್ದಿಷ್ಟ ಉಪವಾಸ, ಆಯುರ್ವೇದ ಆಹಾರ ಪದ್ದತಿಗಳು, ವೈಜ್ಞಾನಿಕವಾಗಿ ಆಧ್ಯಾತ್ಮಿಕವಾಗಿ ಸಾಧನೆಯತ್ತ ಸಾಗಲು ಸಹಕಾರಿಯಾಗುತ್ತದೆ, ಈ ದೇವಸ್ಥಾನದಲ್ಲಿ ಸರ್ವಧರ್ಮಿಯರು ಸರ್ವಜನಾಂಗದವರು ಸೇವೆ ಸಲ್ಲಿಸುತ್ತಿರುವುದು ಸಾಮರಸ್ಯ ಸೋದರತ್ವ ಸಮಾನತೆ ಸಂದೇಶ ಸಮಾಜಕ್ಕೆ ಸಾರುತ್ತಿದೆ ಎಂದು ಹೇಳಿದರು.
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಅಯೂಬ್ ಖಾನ್ ರವರು ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ವಸ್ತುಪ್ರದರ್ಶನದಲ್ಲಿರುವ ಪುರಾತನ ದೇವಾಲಯ ಶ್ರೀ ಸಾಂಬಸದಾಶಿವ ವೀರಾಂಜನೇಯ ಸ್ವಾಮಿ ದೇವಾಲಯವನ್ನ ಭಕ್ತಮಂಡಳಿಯವರ ಮನವಿಯಂತೆ ವೈಜ್ಞಾನಿಕವಾಗಿ ಪಾರಂಪರಿಕ ಶೈಲಿಯಲ್ಲಿ ಅಭಿವೃದ್ಧಿ ಪಡಿಸಿ ಬಡವರ್ಗದ ಜನರಿಗೆ ಅನುಕೂಲವಾಗುವಂತೆ ಮದುವೆ, ನಾಮಕರಣ ಮತ್ತಿತರ ಧಾರ್ಮಿಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಸಿಇಒ ರುದ್ರೇಶ್, ರಂಗಸ್ವಾಮಿ ಪಾಪು, ಮಲ್ಲಿಕಾರ್ಜುನ ಜಿಪಿಎ, ಜಡೆಯಪ್ಪ, ಗುರುರಾಜ್, ಗುತ್ತಿಗೆದಾರ ಮಂಜು ಗೌಡ, ಎಡ್ವಿನ್, ಸರ್ದಾರ್ ಶರೀಫ್, ಸಾಗರ್ ಗೌಡ, ಸುಬ್ಬಣ್ಣ, ಸಂಪತಣ್ಣ, ನಾತೀಕ್, ನಿರೂಪಕ ಅಜಯ್ ಶಾಸ್ತ್ರಿ, ಶ್ರೀನಿವಾಸ್ ಬಿ, ರಾಜೇಶ್ ಸಿ ಗೌಡ, ಪದ್ಮನಾಭ್ ಗುಂಡಾ, ರಘುರಾಜೇ ಅರಸ್, ಕೆ.ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಬಸಪ್ಪ, ಕೆಪಿಸಿಸಿ ಸದಸ್ಯರಾದ ನಜರಬಾದ್ ನಟರಾಜ್, ರಾಕೇಶ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಯುವಭಾರತ್ ಸಂಚಾಲಕರಾದ ಜೋಗಿ ಮಂಜು, ರಿಷಿ ವಿಶ್ವಕರ್ಮ,ವಿನಯ್ ಕಣಗಾಲ್, ಕಡಕೊಳ ಜಗದೀಶ್ ವಿಜಯಕುಮಾರ್, ವಿಘ್ನೇಶ್ವರ ಭಟ್, ನವೀನ್ ಕೆಂಪಿ, ರಂಗನಾಥ್, ಗಣೇಶ್ ಲಿಡ್ಕರ್, ರಾಕೇಶ್, ಶ್ರೀಕಾಂತ್ ಕಶ್ಯಪ್, ಚಕ್ರಪಾಣಿ, ಮಹೇಂದ್ರ ಕಾಗಿನೆಲೆ, ಬೋಪಯ್ಯ, ಪ್ರಾಣೇಶ್ ಮತ್ತಿತರರು ಪಾಲ್ಗೊಂಡಿದ್ದರು.