ಜೆಡಿಎಸ್ ಸರ್ಕಾರ ಇದ್ದಾಗ ಬಾಲಗಂಗಾಧರ ಸ್ವಾಮೀಜಿಗಳ ಮೇಲೆ ಕೇಸ್; ಆಗ ಬಿಜೆಪಿನೋರು ಎಲ್ಲಿ ಹೋಗಿದ್ದರು-ಡಿಕೆಶಿ

ಬೆಂಗಳೂರು: ಜೆಡಿಎಸ್ ಸರ್ಕಾರ ಇದ್ದಾಗ ಬಾಲಗಂಗಾಧರ ಸ್ವಾಮೀಜಿಗಳ ಮೇಲೆ ಕೇಸ್ ಹಾಕಿದ್ದರಲ್ಲಾ ಆಗ ಬಿಜೆಪಿಯವರು ಎಲ್ಲಿ ಹೋಗಿದ್ದರು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಪಕ್ಷಗಳಿಗೆ‌ ಟಾಂಗ್ ನೀಡಿದರು.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ
ಮುಸ್ಲಿಮರಿಗೆ ಮತದಾನ ಇಲ್ಲದಂತೆ ಮಾಡಬೇಕು ಎಂಬ ಚಂದ್ರಶೇಖರ ಸ್ವಾಮೀಜಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿ,
ವಿಧಾನಸೌಧದಲ್ಲಿ ಸಿಎಂ ಉತ್ತರ ಕೊಟ್ಟಿದ್ದಾರೆ. ನಾನು ನಮ್ಮ ಸ್ವಾಮೀಜಿಗಳಿಗೆ ಹಾಗೂ ಎಲ್ಲ ಸ್ವಾಮೀಜಿಗಳಿಗೂ ಸಂವಿಧಾನ, ಯಾರ ಹಕ್ಕುಗಳ ಬಗ್ಗೆಯಾಗಲಿ, ಜಾತಿಗಳ ಬಗ್ಗೆಯಾಗಲಿ ಮಾತನಾಡುವುದು ಬೇಡ ಎಂದು ಮನವಿ ಮಾಡುತ್ತೇನೆ ಎಂದರು.

ನಮ್ಮದು ಮಾನವ ಧರ್ಮ, ನಮ್ಮದು ಸಂವಿಧಾನ, ಎರಡಕ್ಕೂ ನಾವು ಹೆಚ್ಚಿಗೆ ಒತ್ತು ಕೊಟ್ಟು ಹೋಗಬೇಕು. ನಾನು ಸ್ವಾಮೀಜಿಗಳು ಹಾಗೂ ಪೊಲೀಸರಿಗೆ ಹೇಳುತ್ತೇನೆ, ಯಾರು ಕೂಡ ಕಾನೂನಿಗಿಂತ ದೊಡ್ಡವರಲ್ಲ. ನಾನು ಮಾತಾಡಿದ್ರೂ ಕೇಸ್ ಹಾಕುತ್ತಾರೆ ಎಂದು ಹೇಳಿದರು.

ನಮ್ಮ ಕಾಂಗ್ರೆಸ್ ಆಫೀಸ್ ಹುಡುಗರ ಮೇಲೆ ಬಿಜೆಪಿ ಸರ್ಕಾರ ಇದ್ದಾಗ ಕೇಸ್ ಹಾಕಿದ್ದಾರೆ. ಸ್ವಾಮೀಜಿಗಳ ವಿಚಾರಕ್ಕೆ ಉಗ್ರ ಹೋರಾಟ ಮಾಡುತ್ತೇನೆ ಅಂತ ಅಶೋಕ್ ಹೇಳ್ತಾರಲ್ಲಾ ಜೆಡಿಎಸ್ ಸರ್ಕಾರ ಇದ್ದಾಗ ಬಾಲಗಂಗಾಧರ ಸ್ವಾಮೀಜಿಗಳ ಮೇಲೆ ಕೇಸ್ ಹಾಕಿದ್ರಲ್ಲಾ, ಆಗ ಎಲ್ಲೋಗಿದ್ರು, ಬಿಜೆಪಿಯವರು ಏನು ಮಾಡ್ತಿದ್ದರು ಎಂದು ಪ್ರಶ್ನಿಸಿದರು.

ನಿರ್ಮಲಾನಂದನಾಥ ಸ್ವಾಮೀಜಿಗಳ ಫೋನ್ ಟ್ಯಾಪ್ ಮಾಡಿದಾಗ ಯಾಕೆ ಮಾತಾಡಲಿಲ್ಲ, ಆಗ ಅಶೋಕ್ ಎಲ್ಲಿದ್ದರು, ಶ್ರೀಗಳು ಕ್ರಿಮಿನಲ್‌ ತರಹ ಅವರ ನಂಬರ್‌ ಕೊಟ್ಟಿದ್ದರು. ಅದರ ರಿಪೋರ್ಟ್‌ ಬಗ್ಗೆ ಗೊತ್ತಿದ್ಯಾ, ಸುಮ್ಮನೆ ಒಣ ರಾಜಕಾರಣ ಬಿಟ್ಟು ಬಿಡಿ, ಬೆಂಕಿ ಹಚ್ಚಿ ಅದರಲ್ಲಿ ಬಿಡಿ ಸೇದ್ಕೊಂಡು ಕೂತ್ ಕೊಂಡಿದಾರೆ ಅಶೋಕ್ ಎಂದು ಡಿಕೆಶಿ ಗೇಲಿ ಮಾಡಿದರು.

ಸಮಾವೇಶದಿಂದ ಸ್ಥಳೀಯ ಚುನಾವಣೆಗಳಿಗೆ ಸಹಾಯಕವೆ ಎಂಬ ವರದಿಗಾರರ ಪ್ರಶ್ನೆಗೆ, ಏನಾದ್ರೂ ಒಂದು ಉದ್ದೇಶ ಇರಬೇಕು ಅಲ್ವಾ ಎಲೆಕ್ಷನ್ ಬರುತ್ತಲೇ ಇರುತ್ತದೆ. ನಾವು ಕೂಡ ತಯಾರಿ ಮಾಡಿಕೊಳ್ಳಬೇಕು ಮುಂದಿನ ಫ್ರಬವರಿಯಲ್ಲಿ ಚುನಾವಣೆ ಮಾಡಬೇಕೆಂದು ತೀರ್ಮಾನ ಆಗಿದೆ. ಎಲ್ಲಾ ಕಂಪ್ಲೀಟ್ ಆಗಿ ಎಲೆಕ್ಟರೋಲ್‌ ವರ್ಕ್ಸ್ ಆಗಿದೆ ಎಂದು ತಿಳಿಸಿದರು.

ಸಚಿವ ಸಂಪುಟ ಪುನಾರಚನೆ ಇದೆಯೆ ಎಂದು ಕೇಳಿದ್ದಕ್ಕೆ ನಾನು ಮುಖ್ಯಮಂತ್ರಿ ಅಲ್ಲ ಡಿಸಿಎಂ. ಆದ್ರೆ ಪಾರ್ಟಿ ಅಧ್ಯಕ್ಷ. ಸದ್ಯಕ್ಕೆ ಇದರ ಬಗ್ಗೆ ಚರ್ಚೆ ಇಲ್ಲ, ಅದರ ಅವಶ್ಯಕತೆಯೂ ಇಲ್ಲ, ವಿಧಾನಸಭೆಯಲ್ಲಿ ಯಾವ ಸ್ಥಾನವೂ ಖಾಲಿ ಇಲ್ಲ ಎಂದು ಡಿ.ಕೆ. ಶಿವ ಕುಮಾರ್ ಉತ್ತರಿಸಿದರು.