ಶ್ರೀ ಚಂದ್ರಶೇಖರ ನಾಥ ಸ್ವಾಮೀಜಿ ಯವರ ಮೇಲೆ ಎಫ್ಐಆರ್ ಖಂಡಿಸಿ ಪ್ರತಿಭಟನೆ

ಮೈಸೂರು: ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಶ್ರೀ ಚಂದ್ರಶೇಖರ ನಾಥ ಸ್ವಾಮೀಜಿ ಯವರ ಮೇಲೆ ರಾಜ್ಯ ಸರ್ಕಾರ ಎಫ್ಐಆರ್ ದಾಖಲಿಸಿರುವದನ್ನು ಖಂಡಿಸಿ ಮೈಸೂರಿನಲ್ಲಿ ವಿವಿಧ ಸಂಘಟನೆಗಳು ಬೃಹತ್ ಪ್ರತಿಭಟನೆ‌ ನಡೆಸಿದವು.

ಜಿಲ್ಲಾ ಪಂಚಾಯತ್ ಕಛೇರಿ ಮುಂಭಾಗ ರಾಜ್ಯ ಒಕ್ಕಲಿಗರ ಸಂಘ, ಮೈಸೂರು ಜಿಲ್ಲಾ ಒಕ್ಕಲಿಗರ ಸಂಘ ಮತ್ತು ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಸದಸ್ಯರು ಹಾಗೂ ಒಕ್ಕಲಿಗ ಮುಖಂಡರು ಪ್ರತಿಭಟನೆ ನಡೆಸಿ ಕೂಡಲೇ ರಾಜ್ಯ ಸರ್ಕಾರ ಸ್ವಾಮೀಜಿಯವರ ಮೇಲಿನ ಕೇಸನ್ನು ವಾಪಸು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಒಬ್ಬ ಮುಸ್ಲಿಂ ಮಹಿಳೆ, ನಮಗೆ ಕುರಾನ್ ಮೊದಲ ಸಂವಿಧಾನ. ಮುಸ್ಲಿಂ ಕಾನೂನನ್ನು ಪ್ರಶ್ನಿಸುವ ಯಾವುದನ್ನು ನಾವು ಸ್ವೀಕರಿಸಲ್ಲ, ಎಂದು ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಹೇಳಿದ್ದಕ್ಕೆ, ಶ್ರೀ ಚಂದ್ರ ಶೇಖ ರ್ ಸ್ವಾಮೀಜಿ ರವರು ಇವರಿಗೆ ಸಂವಿಧಾನ ಬೇಡ ಎಂದ ಮೇಲೆ, ಮತದಾನದ ಹಕ್ಕು ಏತಕ್ಕೆ ಎಂದು ಹೇಳಿದ್ದಾರೆ.

ಹಿಂದೆ ನಮಗೆ ಸ್ವಾತಂತ್ರ್ಯ ಸಿಕ್ಕಿ ಪಾಕಿಸ್ತಾನ ಬೇರೆಯಾದ ಮೇಲೆ, ಸಂವಿಧಾನದ ಶಿಲ್ಪಿ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರು ಭಾರತದಲ್ಲಿರುವ ಮುಸ್ಲಿಮರಿಗೆ ಪಾಕಿಸ್ತಾನ ಪ್ರತ್ಯೇಕ ದೇಶವಾದ ಮೇಲೆ ಮತದಾನದ ಹಕ್ಕು ಬೇಡ ಎಂದಿದ್ದನ್ನು ಇಲ್ಲಿ ನಾವು ಸ್ಮರಿಸಬಹುದು ಎಂದು ಒಕ್ಕಲಿಗ ಸಂಘದವರು ತಿಳಿಸಿದರು.

ಜೊತೆಗೆ ಸ್ವಾಮೀಜಿ ಅವರು ಮಾತನಾಡುವಾಗ ಮುಸ್ಲಿಂ ರಾಷ್ಟ್ರ ಪಾಕಿಸ್ತಾನದ ವಿಸ್ತೀರ್ಣಕ್ಕಿಂತ ನಮ್ಮ ದೇಶದಲ್ಲಿರುವ ವರ್ಕ್ಫ್ ಆಸ್ತಿ ವಿಸ್ತಿರ್ಣವೇ ಹೆಚ್ಚಿದೆ. ಆದ್ದರಿಂದ ಒಂದು ಭಾರತದಲ್ಲಿರುವ ಮುಸ್ಲಿಮರಿಗೆ ಮತದಾನದ ಹಕ್ಕು ಬೇಡ ಅಥವಾ ವಕ್ಫ್ ಬೋರ್ಡ್ ರದ್ದು ಮಾಡಿ ಎಂದು ಹೇಳಲು ಹೋಗಿರುವುದು ಅಷ್ಟೇ ವಿನಹಾ ಬೇರೇನೂ ಉದ್ದೇಶದಿಂದ ಹೇಳಿಲ್ಲ,ಅದರಲ್ಲಿ ತಪ್ಪು ಹುಡುಕುವ ಅಗತ್ಯವಿಲ್ಲ ಎಂದು ಪ್ರತಿಭಟನಾ ನಿರತರು ಹೇಳಿದರು.

ಕಳೆದ ತಿಂಗಳು ಸಚಿವ ಜಮೀರ್ ಅಹಮದ್ ಕೇಂದ್ರ ಮಂತ್ರಿ ಕುಮಾರಸ್ವಾಮಿಯವರ ಬಣ್ಣದ ಬಗ್ಗೆ ಮಾತ ನಾಡಿದ್ದರು,ಆದರೂ ಸಹ ಅವರ ಮೇಲೆ ರಾಜ್ಯ ಸರ್ಕಾರ ಎಫ್ಐಆರ್ ದಾಖಲಿಸದೆ, ಸ್ವಾಮೀಜಿಯ ವರ ಮೇಲೆ ಕೇಸು ದಾಖಲಿಸಿರುವು ದನ್ನು ನೋಡಿದರೆ ಈ ಸರ್ಕಾರ ಹಿಂದೂ ವಿರೋಧಿ ಸರ್ಕಾರ ಎನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ದರು.

ರಾಜ್ಯ ಸರ್ಕಾರ ತಕ್ಷಣ ಸ್ವಾಮೀಜಿಯವರ ಮೇಲೆ ದಾಖಲಿಸಿರುವ ಎಫ್ಐಆರ್ ವಾಪಾಸು ಪಡೆಯ ಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಒಕ್ಕಲಿಗ ಸಂಘಟನೆ ಗಳು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಸಿ.ಜಿ ಗಂಗಾಧರ್, ಶಿವೇಗೌಡ, ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಲತ ರಂಗನಾಥ್, ಶಿವಲಿಂಗಯ್ಯ, ಮೈಸೂರು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಮರಿಸ್ವಾಮಿ, ಚೇತನ್, ಮಂಜುನಾಥ್, ರಘುರಾಂ, ಚರಣ್ ರಾಜ್, ನಾಗಣ್ಣ, ವರಕೂಡು ಕೃಷ್ಣೇಗೌಡ, ರಾಮಕೃಷ್ಣ, ಆಟೋ ಮಹದೇವು, ನಾಗರಾಜು, ಆನಂದ್ , ಲಕ್ಷ್ಮೀ, ಕೆ ಎಸ್ ಆರ್ ಟಿ ಸಿ ಬಸವರಾಜು, ಪ್ರಕಾಶ್, ಹನುಮಂತಯ್ಯ, ಗಿರೀಶ, ಮಂಜುಳಾ,ಭಾಗ್ಯಮ್ಮ, ನೇಹಾ, ರಾಮಣ್ಣ, ರವಿ ಒಲಂಪಿಯಾ, ಪ್ರದೀಪ್, ಚಂದ್ರಶೇಖರ್, ಪರಿಸರ ಚಂದ್ರು, ಕುಮಾರ್ ಗೌಡ, ಹೊಂಬೇಗೌಡ, ಸ್ವಾಮಿ, ದರ್ಶನ್ ಗೌಡ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.