ಮೈಸೂರಲ್ಲಿ ‘ಇಂಕ್ವಿಲಾಬ್ ಜಿಂದಾಬಾದ್’ ಕಾರ್ಯಕ್ರಮ

ಮೈಸೂರು: ಇಂಕ್ವಿಲಾಬ್ ಜಿಂದಾಬಾದ್ ಎಂಬ ಕಾರ್ಯಕ್ರಮವನ್ನು ಯುವ ಭಾರತ್ ಸಂಘಟನೆ ವತಿಯಿಂದ ನಗರದ ರಾಜಕುಮಾರ್ ರಸ್ತೆಯಲ್ಲಿ ಇರುವ ತ್ರಿವೇಣಿ ವೃತ್ತದಲ್ಲಿ ಸೋಮವಾರ ನಡೆಸಲಾಯಿತು.
ಕ್ರಾಂತಿ ಕಾರಿ ಭಗತ್ ಸಿಂಗ್ ರವರ 113ನೇ ಜನ್ಮ ದಿನಾಚರಣೆಯನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಾರ್ವಜನಿಕ ರಿಗೆ ಸಿಹಿ ವಿತರಿಸುವ ಮೂಲಕ ವಿಜೃಂಭಣೆಯಿಂದ ಆಚರಿಸಲಾಯಿತು.
ನಂತರ ಭಾ.ಜ.ಪ.ನಗರ ಹಿಂದುಳಿದ ವರ್ಗಗಳ ಮೊರ್ಚಾದ ಅಧ್ಯಕ್ಷರಾದ ಜೋಗಿಮಂಜು ರವರು ಮಾತನಾಡಿ ಇಂದಿನ ಯುವ ಪೀಳಿಗೆ ಕ್ರಾಂತಿ ಕಿಡಿಯಾದ ಭಗತ್ ಸಿಂಗ್ ರವರ ಮಾರ್ಗದರ್ಶನದಂತೆ ನಡೆಯಬೇಕು ಎಂದರು.
ಭಗತ್ ಸಿಂಗ್ ರ ದೇಶಪ್ರೇಮ ನಮಗೆ ಮಾದರಿ, ಇಂತಹ ಮಹಾನ್ ದೇಶಪ್ರೇಮಿಗಳು ಹುಟ್ಟು ವುದೆ ಭಾರತಾಂಭೆಯ ಮಡಿಲಲ್ಲಿ ಇಂತಹ ಮಹಾನ್ ಪುರುಷರ ಆಸೆಯಂತೆ ನಮ್ಮೇಲ್ಲರಿಗೂ ಇಂದು ಸ್ವಾತಂತ್ರ್ಯ ಸಿಕ್ಕಿದೆ ಎಂದು ಹೇಳಿದರು.
ಬ್ರಿಟಿಷರ ವಿರುದ್ಧ ‘ಇಂಕ್ವಿಲಾಬ್ ಜಿಂದಾಬಾದ್’ ಎಂಬ ಘೋಷಣೆ ಕೂಗಿದ ಭಗತ್ ಸಿಂಗ್ ರ ಚರಿತ್ರೆಯನ್ನು ಪಠ್ಯ ಪುಸ್ತಕದಲ್ಲಿ ಮುದ್ರಿಸುವ ಮುಖೇನಾ ಹಾಗೂ ನಗರದ ಯಾವುದಾದರೊಂದು ವೃತ್ತಕ್ಕೆ ಇವರ ಹೆಸರು ನಾಮಕರಣ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.
ಈ ಸಂಧರ್ಭದಲ್ಲಿ ನಗರ ಯುವ ಭಾರತ್ ಸಂಘಟನೆಯ ಸಂಚಾಲಕ ಆನಂದ್, ಸಮಾಜ ಸೇವಕರಾದ ಗೋವಿಂದ, ನಾಸಿರ್, ಸ್ವಾಮಿ ಸವಿತ ಸಮಾಜದ ಬಾಲು ಹಾಗು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.