ಮೈಸೂರು: ಮುಸ್ಲಿಮರಿಗೆ ಮತದಾನದ ಹಕ್ಕು ನೀಡಬಾರದು ಎಂದು ಹೇಳಿಕೆ ನೀಡಿ, ಕ್ಷಮೆಯಾಚಿಸಿದರೂ ಚಂದ್ರಶೇಖರ ಸ್ವಾಮೀಜಿ ವಿರುದ್ಧ ಎಫ್.ಐ.ಆರ್ ದಾಖಲಿಸಿರುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ.
ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಚಂದ್ರಶೇಖರ್ ಸ್ವಾಮಿ ವಿರುದ್ಧ ಎಫ್ ಐ ಆರ್ ಹಾಕಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ತಿಳಿಸಿದರು.
ಬಾಯಿತಪ್ಪಿನಿಂದ ಮಾತನಾಡಿದ್ದೇನೆ ಎಂದು ಸ್ವಾಮೀಜಿ ಪತ್ರ ಬರೆದಿದ್ದಾರೆ. ಕ್ಷಮೆಯನ್ನೂ ಕೇಳಿದ್ದಾರೆ. ಆದರೂ ಎಫ್ ಐ ಆರ್ ಹಾಕಲಾಗಿದೆ ಇದು ಸಹಿಸಲಾಗದು ಎಂದರು.
ಸಿದ್ದರಾಮಯ್ಯ ಎಷ್ಟೋ ಭಾಷಣದಲ್ಲಿ ಬಾಯಿತಪ್ಪಿ ಕಾಂಗ್ರೆಸ್ ವಿರುದ್ಧ ಮಾತನಾಡಿದ್ದಾರೆ. ಕಾಂಗ್ರೆಸ್ ಮುಗಿಸುವುದೆ ನನ್ನ ಗುರಿ ಅಂದಿದ್ದಾರೆ. ಕಾಂಗ್ರೆಸ್ ನವರು ಅವರನ್ನ ಹೊರ ಹಾಕಿದ್ರ. ಬಾಯಿತಪ್ಪಿ ಹಾಡಿದ ಮಾತಿಗೆ ಎಫ್ ಐ ಆರ್ ಹಾಕಿದ್ದಾರೆ. ಇದನ್ನು ವಾಪಸ್ಸು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಮುಡಾ ಕಮಿಷನರ್ ಮತ್ತು ಅಧ್ಯಕ್ಷರ ವಿರುದ್ಧ ದೂರು ದಾಖಲಿಸಿ ಮುಡಾ ಆಸ್ತಿಗೆ ಮಾಲೀಕ ಅಂದ್ರೆ ಮುಡಾ ಅಧ್ಯಕ್ಷ ಕಮಿಷನರ್ ಇದೀಗ ಜಿಲ್ಲಾಧಿಕಾರಿಯೆ ಆಗಿದ್ದಾರೆ. ಅಧ್ಯಕ್ಷರಾದ ಮೇಲೆ ಯಾಕಾಗಿ ಕಂಪ್ಲೆಂಟ್ ಮಾಡಿಲ್ಲ. ಐಎಎಸ್ ಮಾಡಿದವರು ಬುದ್ದಿವಂತ ದೈರ್ಯವಂತರು. ಆದರೂ ದೂರು ಕೊಡುವ ಕೆಲಸ ಮಾಡ್ತಿಲ್ಲ ಎಂದು ಕಿಡಿಕಾರಿದರು.
ಈ ಬಗ್ಗೆ ಸಭೆಯಲ್ಲಿ ಕೇಳಿದ್ರೆ ದೂರು ಕೊಡುತ್ತೇವೆ ಅಂತ ಹೇಳ್ತಾರೆ. ನಂತರ ಲೀಗಲ್ ಅಡ್ವೈಸ್ ಕೇಳ್ತೇವೆ ಅಂತಾರೆ.ಹಿಂದಿನ ಮುಡಾ ಕಮಿಷನರ್ ಮತ್ತು ಅಧ್ಯಕ್ಷರ ವಿರುದ್ಧ ದೂರು ದಾಖಲಿಸಬೇಕು. ಮುಡಾ ದಲ್ಲಿ 50-50 ಹಂಚಿಕೆಯಾದ ನಿವೇಶನ ಸಂಖ್ಯೆ ಎಷ್ಟು ಎಂಬುದು ಲೆಕ್ಕ ಸಿಕ್ಕಿಲ್ಲ. ಮುಡಾದ ಬಗ್ಗೆ ಈಗಲೇ ಕ್ರಮ ತೆಗೆದುಕೊಳ್ಳದಿದ್ದರೆ ಬಹಳ ಜನರಿಗೆ ಹಾನಿಯಾಗುತ್ತದೆ ಎಂದು ವಿಶ್ವನಾಥ್ ಆತಂಕ ವ್ಯಕ್ತಪಡಿಸಿದರು.
ಸೈಟ್ ಗಳನ್ನ ಮಾರಿದ್ದಾರೆ. ಕೊಂಡುಕೊಂಡವರ ಕಥೆ ಏನಾಗಬೇಕು. ಮೈಸೂರು ಮುಡಾ ಕಳ್ಳತನವಾಗಿದೆ ಆದ್ರು ಸಿಎಂ ಉಸಿರು ಎತ್ತುತ್ತಿಲ್ಲ. 140 ಫೈಲ್ಸ್ ತೆಗೆದುಕೊಂಡು ಹೋಗಿದ್ದಾರೆ ಎಂದು ಲೋಕಯುಕ್ತದ ಟಿಪ್ಪಣಿಯಲ್ಲಿ ಇದೆ. ಅದು ಯಾರ ಸೈಟ್,ಯಾವ ಪಾರ್ಟಿಯವರದು ಎಷ್ಟು ಎಲ್ಲವನ್ನು ತಿಳಿಸಿ. ಸರ್ಕಾರಿ ಪೈಲ್ ಗಳನ್ನ ರದ್ದಿ ಅಂದುಕೊಂಡಿದ್ದಾರ. ಎಲ್ಲಾ ಪೈಲ್ ಗಳನ್ನ ಬೈರತಿ ಹೊತ್ತುಕೊಂಡು ಹೋಗಿದ್ದಾರೆ. ಯಾಕೆ ಪೊಲೀಸ್ ಕಂಪ್ಲೆಂಟ್ ಕೊಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮುಡಾ ದೂರ ಕೊಟ್ಟಿಲ್ಲ ಇದರ ಹಿಂದೆ ಕೇಸ್ ಕ್ಲೋಸ್ ಮಾಡುವ ಪ್ಲಾನ್ ಇದೆ,ಈ ವಿಚಾರವಾಗಿ ಸಿದ್ದರಾಮಯ್ಯ ಮಾದರಿಯಾಗಬೇಕಿತ್ತು,ಏನೂ ಆಗ್ಲಿಲ್ಲ ಎಂದು ವಿಶ್ವನಾಥ್ ಟೀಕಿಸಿದರು.