ಮುಡಾ ಹಗರಣ:ಮಹತ್ವದ ದಾಖಲೆ ಲಭ್ಯ

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಮಹತ್ವದ ದಾಖಲೆ ಲಭ್ಯವಾಗಿದೆ.

ಮುಡಾದಿಂದ ಒಟ್ಟು 1095 ಸೈಟುಗಳನ್ನು ಬೇನಾಮಿ ಮತ್ತು ಇತರ ವಹಿವಾಟುಗಳಲ್ಲಿ ಅಕ್ರಮವಾಗಿ ಮಂಜೂರು ಮಾಡಲಾಗಿದೆ ಎಂಬುದು ತನಿಖೆ ವೇಳೆ ಗೊತ್ತಾಗಿದೆ.

ಅಕ್ರಮವಾಗಿ ನೀಡಲಾಗಿರುವ ಸೈಟ್ ಗಳ ಪೈಕಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಗೆ 14 ಸೈಟ್ ಗಳನ್ನು ಹಸ್ತಾಂತರಿಸಿದ್ದಾರೆ ಎಂಬುದಕ್ಕೆ ಪುರಾವೆಗಳು ಸಿಕ್ಕಿದೆ ಎಂದು ಮೂಲಗಳು‌ ತಿಳಿಸಿವೆ

ಮುಡಾದಲ್ಲಿ ನಡೆದಿರುವ ಅಕ್ರಮ ಸೈಟುಗಳ ತನಿಖೆ ಸಂದರ್ಭದಲ್ಲಿ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿ ಲೋಕಾಯುಕ್ತಕ್ಕೆ ನೀಡಿ ಈ ಕುರಿತು ತನಿಖೆ ನಡೆಸುವಂತೆ ಇಡಿ ಸೂಚಿಸಿದೆ

1095 ಸೈಟುಗಳ ಬೇನಾಮಿ ವ್ಯವಹಾರದಲ್ಲಿ ಅಕ್ರಮ ಹಣ ವರ್ಗಾವಣೆ, ಭೂ ಪರಿವರ್ತನೆ, ಸಹಿಗಳ ಫೋರ್ಜರಿ ಸೇರಿದಂತೆ ಇನ್ನೂ ಹಲವು ಸಾಕ್ಷಾಧಾರಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ಸಹಾಯಕರಲ್ಲಿ ಒಬ್ಬರಾದ ಎಸ್‌.ಜಿ ದಿನೇಶ್ ಕುಮಾರ್ (ಕುಮಾರ್) ಅವರು ಈ ಪ್ರಕ್ರಿಯೆಯಲ್ಲಿ ಅನಗತ್ಯವಾಗಿ ಪ್ರಭಾವ ಬೀರಿದ್ದಾರೆ ಎಂಬುದಕ್ಕೂ ಸಾಕ್ಷಿಗಳು ದೊರೆತಿವೆ ಎಂದು ಇಡಿ ತನ್ನ ವರದಿಯಲ್ಲಿ ತಿಳಿಸಿದೆ.