ಮೈಸೂರು: ಹಾಸನದಲ್ಲಿ ಇಂದು ನಡೆಯುತ್ತಿರುವ ಜನಕಲ್ಯಾಣ ಶ್ರೀ ಸಿದ್ದರಾಮಯ್ಯ ಸ್ವಾಭಿಮಾನಿ ಸಮಾವೇಶಕ್ಕೆ ಸಾಕಷ್ಟು ಬಸ್ ಗಳನ್ನು ನೀಡಿದ ಪರಿಣಾಮ ವಿದ್ಯಾರ್ಥಿಗಳು ಆಕ್ರೋಶಗೊಂಡರು.
ಬಸ್ ಗಳಿಲ್ಲದೆ ಶಾಲಾ,ಕಾಲೇಜಿಗೆ ಹೋಗಲಾಗದೆ ವಿಧ್ಯಾರ್ಥಿಗಳು ಕೆರಳಿ,ಹುಣಸೂರಿನಲ್ಲಿ ಬಸ್ ಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.
ನೂರಾರು ಸರ್ಕಾರಿ ಬಸ್ ಗಳನ್ನ ಸಮಾವೇಶಕ್ಕೆ ಕಾರ್ಯಕರ್ತರನ್ನ ಕರೆತರಲು ಬಳಸಿಕೊಂಡಿರುವ ಕಾರಣ ಶಾಲಾ ಕಾಲೇಜುಗಳಿಗೆ ತೆರಳಲು ವಿಧ್ಯಾರ್ಥಿಗಳಿಗೆ ಸಮಸ್ಯೆ ಉದ್ಭವವಾಯಿತು.
ಬಸ್ ಗಳ ಕೊರತೆಯಿಂದಾಗಿ ಹುಣಸೂರು ತಾಲೂಕಿನ ಬಿಳಿಕೆರೆ ವಿಧ್ಯಾರ್ಥಿಗಳು ಸಮಾವೇಶದ ವಿರುದ್ದ ಸಿಡಿದೆದ್ದರು.
ರಾಜ್ಯದ ಮೂಲೆ ಮೂಲೆಗಳಿಂದ ಹಾಸನದತ್ತ ಕಾರ್ಯಕರ್ತರನ್ನ ಕರೆದೊಯ್ಯುತ್ತಿದ್ದ ಬಸ್ ಗಳನ್ನ ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಚಾಲಕರ ಜೊತೆಗೆ ಮಾತಿನ ಚಕಮಕಿ ನಡೆಸಿದರು.ಅಲ್ಲದೆ ಬಸ್ ಗಳಿಗೆ ಅಳವಡಿಸಲಾದ ಸಮಾವೇಶದ ಬ್ಯಾನರ್ ಗಳನ್ನ ಕಿತ್ತುಹಾಕಿ ಸರ್ಕಾರ ಹಾಗೂ ಸಾರಿಗೆ ಇಲಾಖೆ ವಿರುದ್ಧ ಘೋಷಣೆ ಕೂಗಿದರು.
ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸಿ ವಿಧ್ಯಾರ್ಥಿಗಳ ಮನ ಒಲಿಸುವ ಪ್ರಯತ್ನ ಮಾಡಿದರು.ಬಸ್ ಹಾಗೂ ಇತರೆ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ವಿಧ್ಯಾರ್ಥಿಗಳು ಶಾಲೆ,ಕಾಲೇಜಿಗೆ ತೆರಳಲಾಗದೆ ಹಿಡಿಶಾಪ ಹಾಕಿದರು,ಅವರೊಂದಿಗೆ ಪೋಷಕರು ಹಾಗೂ ಸ್ಥಳೀಯರು ಸಾಥ್ ನೀಡಿದರು.