ಕೌಟುಂಬಿಕ ಕಲಹದಿಂದ ಪತ್ನಿಯ ಕೊಂದ ಪತಿ

ಮೈಸೂರು: ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಪತಿರಾಯನೊಬ್ಬ ಪತ್ನಿಯ ಕತ್ತು ಕತ್ತರಿಸಿ ಹತ್ಯೆ ಮಾಡಿರುವ ಘಟನೆ ಸಾಂಸ್ಕೃತಿಕ ನಗರಿಯಲ್ಲಿ ನಡೆದಿದೆ.

ಮೈಸೂರಿನ ಲಕ್ಷ್ಮಿಕಾಂತ ನಗರದಲ್ಲಿ ಈ ಹೇಯ ಘಟನೆ ನಡೆದಿದ್ದು,ಶೃತಿ (28) ಕೊಲೆಯಾದ ಪತ್ನಿ.ಮನು(27) ಹತ್ಯೆ ಮಾಡಿದ ಪತಿ.ಪತ್ನಿಯ ಕೊಂದ ನಂತರ ಈತ ಪೊಲೀಸರಿಗೆ ಶರಣಾಗಿದ್ದಾನೆ.

ಬನುಮಯ್ಯ ಕಾಲೇಜಿನಲ್ಲಿ ಬಿಕಾಂ ನಲ್ಲಿದ್ದ ವೇಳೆ ಶೃತಿ,ಮನು ಪರಸ್ಪರ ಪ್ರೀತಿಸಿ,5 ವರ್ಷಗಳ ಹಿಂದೆ ಮದುವೆ ಆಗಿದ್ದಾರೆ.

ಇಬ್ಬರದು ಅಂತರ್ಜಾತಿ ವಿವಾಹ, ಲಕ್ಷ್ಮಿಕಾಂತ ನಗರದಲ್ಲಿ ಮನೆ ಮಾಡಿ ವಾಸವಿದ್ದರು.ಆಗಾಗ  ದಂಪತಿ ನಡುವೆ ಕ್ಷುಲ್ಲಕ ಕಾರಣಗಳಿಗೆ ಜಗಳ ನಡೆಯುತ್ತಲೆ ಇತ್ತು.

ಗುರುವಾರ ಕೂಡಾ ಮುಂಜಾನೆ ಜಗಳವಾಗಿದೆ.ಈ ವೇಳೆ ಅದು ವಿಕೋಪಕ್ಕೆ ತಿರುಗಿ ಕೋಪದಲ್ಲಿ ಪತ್ನಿಯ ಕುತ್ತಿಗೆ ಕೊಯ್ದು ಹತ್ಯೆ ಮಾಡಿ ನಂತರ ಮನು ಸೀದಾ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

ಈ ಸಂಬಂಧ ಹೆಬ್ಬಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.