ಬೆಂಗಳೂರು: ದಲಿತ ಸಮಾಜಕ್ಕೆ ಸೇರಿದ ನಿಂಗನಿಗೆ ಸಿಗಬೇಕಿದ್ದ ಬದಲಿ ನೀವೇಶನಗಳನ್ನು ಅಕ್ರಮವಾಗಿ ರಾಜಕೀಯ ಅಧಿಕಾರ ದುರ್ಬಳಕೆ ಮಾಡಿ ಕಬಳಿಸಿದಾಗ ಅಹಿಂದ ನೆನಪಾಗಲಿಲ್ಲವೇ ಸಿದ್ದಹಸ್ತ ಸಿದ್ದರಾಮಯ್ಯ ನವರೇ ಎಂದು ಜೆಡಿಎಸ್ ಪ್ರಶ್ನಿಸಿದೆ.
ಮುಡಾ ಹಗರಣ ಬುಡಕ್ಕೆ ಬಂದಿರುವಾಗ ನಿಮಗೆ ಅಹಿಂದ ನೆನಪಾಗುತ್ತಿದೆ ಅಲ್ಲವೆ? ಮೆತ್ತಿಕೊಂಡಿರುವ ಕಪ್ಪುಮಸಿ ಅರ್ಥಾತ್ ವೈಟ್ನರ್ ಮರೆಮಾಚಲು ಸ್ವರಕ್ಷಣೆಗಾಗಿ ಹಾಸನದಲ್ಲಿ ಸಮಾವೇಶ ಮಾಡಿಕೊಂಡ ಡೋಂಗಿವಾದಿ ನೀವು ಎಂದು ಜೆಡಿಎಸ್ ಟ್ವೀಟ್ ಮಾಡಿ ಟೀಕಿಸಿದೆ.
ಅಂದು ಜೆಡಿಎಸ್ ವೇದಿಕೆಯಲ್ಲಿಯೇ ಅಹಿಂದ ಸಮಾವೇಶ ಮಾಡಿದ್ದರೇ ಹೆಚ್.ಡಿ.ದೇವೇಗೌಡರು ನಿಮ್ಮನ್ನು ಯಾಕೆ ಉಚ್ಛಾಟಿಸುತ್ತಿದ್ದರು ನಾನು ಎಂಬ ಅಹಂನಿಂದ ಪಕ್ಷ ವಿರೋಧಿ ಚಟುವಟಿಕೆ, ಪಿತೂರಿ ನಡೆಸಿದ್ದಕ್ಕೆ ನಿಮ್ಮನ್ನು ಉಚ್ಛಾಟಿಸಲಾಯಿತು ತಿಳಿದುಕೊಳ್ಳಿ
ನಿವೃತ್ತಿಯಾಗಿದ್ದ ಸ್ವಜಾತಿ ಐಪಿಎಸ್ ಅಧಿಕಾರಿಯೊಬ್ಬರನ್ನು ಗೃಹ ಇಲಾಖೆ ಸಲಹೆಗಾರಾಗಿ ನೇಮಿಸಿಕೊಂಡು, ಆ ಇಲಾಖೆ ನಿರ್ವಹಿಸುತ್ತಿದ್ದ ದಲಿತ ನಾಯಕ ಡಾ.ಜಿ.ಪರಮೇಶ್ವರ್ ಅವರನ್ನು ಹತ್ತಿಕ್ಕಿದಾಗ ಅಹಿಂದ ನೆನಪಾಗಲಿಲ್ಲವೇ ಎಂದು ಪ್ರಶ್ನಿಸಿದೆ.
ದಲಿತ ಸಮಾಜದ ಜಿಲ್ಲಾಧಿಕಾರಿಯಾಗಿದ್ದ ಶಿಖಾ ಅವರ ಮೇಲೆ ನಿಮ್ಮ ಆಪ್ತ ಮರೀಗೌಡ ಹಲ್ಲೆ ನಡೆಸಿದರೂ ಸ್ವಜಾತಿ ವ್ಯಾಮೋಹಕ್ಕೆ ಒಳಗಾಗಿ ಆತನನ್ನ ರಕ್ಷಣೆ ಮಾಡಿದಾಗ ಅಹಿಂದ ನೆನಪಾಗಲಿಲ್ಲ, ಕನಿಷ್ಠ ನಾಚಿಕೆಯೂ ಆಗಲಿಲ್ಲ ಅಲ್ಲವೆ
ಮುಡಾದಲ್ಲಿ ಮುಕ್ಕಿ ತಿಂದಿರುವ ಬೊಗಳೆ ಭಾಷಣಕಾರ ಜಾತಿವಾದಿ ಭ್ರಷ್ಟಾರಾಮಯ್ಯಗೆ ಅಹಿಂದ ಎಂಬುದು ಒಂದು ರಕ್ಷಾಕವಚ ಅಷ್ಟೇ.
ಅಹಿಂದ ಎಂಬ ಟ್ಯಾಗ್ ಇಟ್ಟುಕೊಂಡು ಇಷ್ಟೆಲ್ಲಾ ಮಾಡುತ್ತಿರುವ ನಿಮಗೆ ಆತ್ಮಸಾಕ್ಷಿ ಎನ್ನುವುದು ಇದೆಯಾ ಎಂದು
ಮೂಲ ಕಾಂಗ್ರೆಸ್ಸಿಗರಿಗೆ ಅಧಿಕಾರ ತಪ್ಪಿಸಿ, ಸಮಾವೇಶಗಳ ಮೂಲಕ ಏಕವ್ಯಕ್ತಿ ಪ್ರದರ್ಶನ ಮಾಡುತ್ತಿರುವ ಲಜ್ಜೆಗೆಟ್ಟ ಸಿದ್ದಹಸ್ತ ಸಿದ್ದರಾಮಯ್ಯ
ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಿದ ಸಿದ್ದಕುತಂತ್ರಿ ನೀವು.ಗುಂಪುಗಾರಿಕೆ ಷಡ್ಯಂತ್ರ ನಡೆಸಿ ರಾಜಕಾರಣದಿಂದ ಖರ್ಗೆಯವರನ್ನು ಬಲವಂತವಾಗಿ ದಿಲ್ಲಿ ರಾಜಕೀಯಕ್ಕೆ ತಳ್ಳಿದ ಪರಮ ಸ್ವಾರ್ಥಿ ನೀವು ಎಂದು ಜೆಡಿಎಸ್ ಸಿದ್ದರಾಮಯ್ಯ ವಿರುದ್ದ ಟೀಕಿಸಿದೆ.
2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದ್ದ ಅಂದಿನ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರನ್ನು ಕೊರಟಗೆರೆ ಕ್ಷೇತ್ರದಲ್ಲಿ ಕುತಂತ್ರದಿಂದ ಸೋಲಿಸಿದಿರಿ.
ಸಿಎಂ ರೇಸ್‌ನಲ್ಲಿದ್ದ ಡಾ.ಪರಮೇಶ್ವರ್ ಅವರನ್ನು ಸ್ವಾರ್ಥಕ್ಕಾಗಿ ಸೋಲಿಸಿ ಮುಖ್ಯಮಂತ್ರಿ ಗಾದಿಗೇರಿದ ಕಪಟಿ ಎಂದು ತೀವ್ರವಾಗಿ ಕಿಡಿಕಾರಿದೆ.