ಡೆಮಾಸ್ಕಸ್: ಸಿರಿಯಾದಲ್ಲಿ ಹದಗೆಡುತ್ತಿರುವ ಪರಿಸ್ಥಿತಿಯ ಬಗ್ಗೆ ಭಾರತ ಸರ್ಕಾರ ಕಳವಳ ವ್ಯಕ್ತಪಡಿಸಿದ್ದು ಆದಷ್ಟು ಬೇಗ ಅಲ್ಲಿಂದ ಭಾರತಕ್ಕೆ ವಾಪಸ್ ಆಗುವಂತೆ ಭಾರತೀಯ ವಿದೇಶಾಂಗ ಸಚಿವಾಲಯ ಸೂಚಿಸಿದೆ.
ಜಿಹಾದಿ ಗುಂಪು ಹಯಾತ್ ತಹ್ರೀರ್ ಅಲ್-ಶಾಮ್ ನೇತೃತ್ವದ ದಂಗೆಕೋರರು ಸಿರಿಯಾದ ಪ್ರಮುಖ ನಗರಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಬಿಕ್ಕಟ್ಟು ತಲೆದೋರಿದ್ದು, ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಭಾರತದ ವಿದೇಶಾಂಗ ಸಚಿವಾಲಯ ಪ್ರಕಟಣೆ ಹೊರಡಿಸಿದ್ದು, ಅನಗತ್ಯ ಪ್ರಯಾಣ ಮುಂದೂಡಿ, ಲಭ್ಯವಿರುವ ವಾಣಿಜ್ಯ ವಿಮಾನಗಳ ಮೂಲಕ ಸಿರಿಯಾ ತೊರೆದು,ತಕ್ಷಣ ವಾಪಸ್ ಬಂದುಬಿಡಿ ಎಂದು ಸಲಹೆ ನೀಡಿದೆ.
ತುರ್ತು ಸಹಾಯವಾಣಿ ಸಂಖ್ಯೆಯನ್ನು (+963 993385973) ಡೆಮಾಸ್ಕಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಾಗಿ ಹಂಚಿಕೊಳ್ಳಲಾಗಿದೆ.
ಈ ಸಂಖ್ಯೆಗೆ ವಾಟ್ಸಪ್ ನಲ್ಲಿ ಓದಿದ ಹೇಳಿಕೆಯನ್ನು ಸಹ ಬಳಸಬಹುದು. ಜೊತೆಗೆ ತುರ್ತು ಇಮೇಲ್ ಐಡಿಯನ್ನು ಕೂಡ ಸೇರಿಸಬಹುದು ಎಂದು ತಿಳಿಸಲಾಗಿದೆ.