ಎಸ್.ಎಂ. ಕೃಷ್ಣ ಅಗಲಿಕೆಗೆ ಗಣಪತಿ ಶ್ರೀಗಳ ಸಂತಾಪ 

ಮೈಸೂರು: ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ನಿಧಾನಕ್ಕೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿ, ಅವರ ಆತ್ಮಕ್ಕೆ ಮುಕ್ತಿಗಾಗಿ ಪ್ರಾರ್ಥಿಸಿದ್ದಾರೆ.

ಕೃಷ್ಣರವವರು ನಲವತ್ತು ವರ್ಷಗಳಿಂದ ಮೈಸೂರಿನ ಅವಧೂತ ದತ್ತ ಪೀಠಕ್ಕೆ ಬರುತ್ತಿದ್ದರು ಹಾಗೂ ಸ್ವಾಮೀಜಿ ಅವರ ಬಗ್ಗೆ ಅಪಾರ ಭಕ್ತಿ ಗೌರವಗಳನ್ನು  ಹೊಂದಿದ್ದರು.

ಕೃಷ್ಣ ರವರು ಈ ನಾಡು ಕಂಡ ಅಪ್ರತಿಮ ಹಾಗೂ ಅಪರೂಪ ನಾಯಕ. ಅವರ ಅವಧಿಯಲ್ಲಿ ಬೆಂಗಳೂರು ಹಾಗೂ ರಾಜ್ಯವು ಅಪಾರ ಅಭಿವೃದ್ಧಿ ಕಂಡು ಅವರ ದೀರ್ಘ ದೃಷ್ಠಿತ್ವ ಹಾಗೂ ನಾಯಕತ್ವಕ್ಕೆ ಸಾಕ್ಷಿಯಾಗಿದೆ.

ಶ್ರೀ ಕೃಷ್ಣ ರವರು ಆಧ್ಯಾತ್ಮ ವಿಷಯಗಳ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದವರಾಗಿದ್ದು, ಸ್ವಾಮೀಜಿಯವರೊಂದಿಗೆ ಆಧ್ಯಾತ್ಮಿಕ ಹಾಗೂ ಧಾರ್ಮಿಕ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದರು. ಮೃತರ ಆತ್ಮಕ್ಕೆ ಶಾಂತಿ ಹಾಗೂ ಮುಕ್ತಿ ದೊರೆಯಲೆಂದು, ಬಂಧುವರ್ಗಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲೆಂದು ಪೂಜ್ಯ ಸ್ವಾಮೀಜಿಯವರು ಪ್ರಾರ್ಥಿಸಿದ್ದಾರೆ.