ನಿತ್ರಾಣಗೊಂಡಿದ್ದವನ ನೆರವಿಗೆ ನಿಂತು ಮಾನವೀಯತೆ ಮೆರೆದ ಎಂ.ಕೆ.ಎಸ್

ಮೈಸೂರು: ಮೈಸೂರಿನ ಕುವೆಂಪುನಗರದ ರಾಷ್ಟ್ರ ಕವಿ ಕುವೆಂಪು ಪ್ರತಿಮೆಯ ಬಳಿ ಹಲವು ದಿನಗಳಿಂದ ಆಹಾರ,ನೀರು ಇಲ್ಲದೆ ರಸ್ತೆ ಬದಿಯಲ್ಲಿ ನಿತ್ರಾಣಗೊಂಡು ಬಿದ್ದಿದ್ದ ವ್ಯಕ್ತಿಗೆ ನೆರವಾಗುವ ಮೂಲಕ ಮಾಜಿ ಶಾಸಕ ಎಸ್.ಎಂ.ಸೋಮಶೇಖರ್ ಮಾನವೀಯತೆ ಮೆರೆದಿದ್ದಾರೆ.

ನಂಜನಗೂಡು ಮೂಲದ ಶ್ರೀಕಂಠ ಎಂಬವರು ನಿತ್ರಾಣಗೊಂಡು ರಸ್ತೆ‌ಬದಿ ಬಿದ್ದಿದ್ದರು. ಆಸ್ಪತ್ರೆಗೆ ಸೇರಿಸಲು ಸ್ಥಳೀಯ ನಾಗರೀಕರು ಪಾಲಿಕೆಗೆ ಹಾಗೂ 47ನೇ ವಾರ್ಡಿನ ಮಾಜಿ ಮಹಾಪೌರರಿಗೆ ಕರೆ ಮಾಡಿ ತಿಳಿಸಿದರು.ಆದರೆ ಏನೂ ಪ್ರಯೋಜನವಾಗಿರಲಿಲ್ಲ.

ಇದನ್ನು ಮನಗಂಡು ಸ್ಥಳಕ್ಕೆ‌ ಧಾವಿಸಿದ ಎಂ ಕೆ ಸೋಮಶೇಖರ್ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅವರು ಕೃಷ್ಣರಾಜೇಂದ್ರ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿಗಳಿಗೆ ಕರೆ ಮಾಡಿ ಆಂಬುಲೆನ್ಸ್ ಕರೆಯಿಸಿ ನಿರಾಶ್ರಿತನನ್ನು ಅದರಲ್ಲಿ ಕಳುಹಿಸಿ ಹೆಚ್ಚಿನ ಚಿಕಿತ್ಸೆ,ಔಷಧೋಪಚಾರ,ಶುಶ್ರೂಷೆ ನೀಡಲು ಸೂಚಿಸಿದರು.

ನಂತರ ಪಾಲಿಕೆಯ ನಿರಾಶ್ರಿತರ ಕೇಂದ್ರಕ್ಕೂ ಸಹ ಕರೆ ಮಾಡಿ ಗುಣಮುಖನಾದ ನಂತರ ನಿರಾಶ್ರಿತನಿಗೆ ಸ್ಥಳ ನೀಡಿ ನಿರಾಶ್ರಿತರ ಕೇಂದ್ರಕ್ಕೆ ದಾಖಲು ಮಾಡಿಕೊಂಡು ಸಹಾಯ ನೀಡಿ ಎಂದು ತಿಳಿಸಿದರು.

ನಿತ್ರಾಣಗೊಂಡ ವ್ಯಕ್ತಿಯನ್ನು ಸ್ವತಃ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಅವರೇ ನಿಂತು ಆಂಬುಲೆನ್ಸ್ ಮೂಲಕ ಶಿಫ್ಟ್ ಮಾಡಿಸಿದ್ದನ್ನು ಕಂಡು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಕೃಷ್ಣರಾಜ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಸೋಮಶೇಖರ್,ಸಮಾಜ ಸೇವಕ ರಾಮಪ್ಪರಮೇಶ್, ಆಶ್ರಯ ಸಮಿತಿ ಸದಸ್ಯರಾದ ಗುಣಶೇಖರ್, ಮುಖಂಡರಾದ ರೂಪೇಶ್, ಆನಂದ್,ನದೀಂ ಉಪಸ್ಥಿತರಿದ್ದರು.

ಈ‌ ವೇಳೆ ಮಾತನಾಡಿದ ಎಂ.ಕೆ.ಸೋಮಶೇಖರ್
ಇಂತಹ ಕೆಲಸ ನನಗೇನು ಹೊಸದಲ್ಲ.ರಸ್ತೆಯಲ್ಲಿ ಅದೆಷ್ಟೋ ಜನ ಅಮಾಯಕರು,ಅಪರಿಚಿತರು ನಿತ್ರಾಣಗೊಂಡಿರುವವರನ್ನು ಆಸ್ಪತ್ರೆಗೆ ಸೇರಿಸಿ ದ್ದೇನೆ,ಜತೆಗೆ ಆರ್ಥಿಕ ಸಹಾಯ, ಔಷಧೋಪ ಚಾರ ಕೊಡಿಸಿದ್ದೇನೆ ಎಂದು ತಿಳಿಸಿದರು.

ಎಷ್ಟೋ ಜನ ಅಪಘಾತಕ್ಕೊಳಪಟ್ಟವರನ್ನು ಆಸ್ಪತ್ರೆಗೆದಾಖಲಿಸಿದ್ದೇನೆ.ಮಾನವೀಯತೆಗಿನ್ನ ದೊಡ್ಡದು ಏನು ಇಲ್ಲ.ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗುವಂತೆ ಮಾಡಿದರೆ ಎಷ್ಟೋ ಜನರ ಪ್ರಾಣ ಉಳಿಯುತ್ತದೆ ಎಂದು ಹೇಳಿದರು.

ನಾನೆಂದೂ ಆಂಬುಲೆನ್ಸ್ ಬರಲಿ ಎಂದು ಕಾಯುವವನಲ್ಲ, ರಕ್ತದ ಮಡಿಲಲ್ಲಿ ಬಿದ್ದಿದ್ದವರನ್ನು ನನ್ನ ಕಾರಿನಲ್ಲಿಯೇ ಆಸ್ಪತ್ರೆಗೆ ಸೇರಿಸಿದ್ದೇನೆ.ತುಂಬಾ ಜನ ಎಲ್ಲಾದರೂ ಸಿಕ್ಕಿದಾಗ ಸರ್ ನೀವು ನನ್ನ ಜೀವ ಉಳಿಸಿದ್ದೀರಾ ಎಂದು ಹೇಳಿದಾಗ ನಮಗೆ ಸಿಗುವ ಸಂತೋಷ ಹೇಳಲು ಆಗುವುದಿಲ್ಲ.

ಕಷ್ಟದಲ್ಲಿರುವ ಯಾರೇ ಆಗಲಿ ಸಹಾಯ ಮಾಡಬೇಕು. ಅದೇ ನಾವು ಮಾಡಬೇಕಾದ ದೇವರ ಕೆಲಸ.ಅದೇ ನಮಗೆ ತೃಪ್ತಿ ಕೊಡುವಂತದ್ದು ಎಂದು ಸೋಮಶೇಖರ್ ತಿಳಿಸಿದರು.