ಬೆಂಗಳೂರು: ಡ್ರಗ್ಸ್ ಪ್ರಕರಣ ಆರೋಪದಲ್ಲಿ ಬಂಧಿತ ನಟಿಯರಾದ ರಾಗಿಣಿ ಮತ್ತು ಸಂಜನಾರ ಜಾಮೀನು ಅರ್ಜಿಯನ್ನು ಎನ್ ಡಿಪಿಎಸ್ ವಿಶೇಷ ನ್ಯಾಯಾಲಯವು ವಜಾಗೊಳಿಸಿದೆ.
ಈ ಹಿನ್ನೆಲೆಯಲ್ಲಿ ನಟಿಯರಿಬ್ಬರಿಗೂ ಜೈಲೇ ಗತಿ ಆಗಿದೆ.
ರಾಗಿಣಿ ಮತ್ತು ಸಂಜನಾ ಹೈಕೋರ್ಟ್ ಮೊರೆ ಹೋಗುವ ನಿರೀಕ್ಷೆಯಿದೆ ಎಂದು ತಿಳಿದು ಬಂದಿದೆ.
ಹಾಗೆಯೇ ರವಿಶಂಕರ್, ಪ್ರಶಾಂತ್ ರಂಕಾ, ಅಭಿಸ್ವಾಮಿ, ವೈಭವ್ ಚೈನ್ ಮತ್ತು ಪ್ರಶಾಂತ್ ರಾಜು ಜಾಮೀನು ಅರ್ಜಿ ವಿಚಾರಣೆಯನ್ನು ಇದೇ ಸೆ. 30ಕ್ಕೆ ಮುಂದೂಡಲಾಗಿದೆ.
ಮತ್ತೊಬ್ಬ ಆರೋಪಿ ವಿರೇನ್ ಖನ್ನ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಅ. 1ಕ್ಕೆ ಮುಂದೂಡಿದೆ.