ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಜೈಲು ಸೇರಿದ್ದ ದರ್ಶನ್ ಗೆಳತಿ ಪವಿತ್ರಾ ಗೌಡ ಕಡೆಗೂ ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್ ಆಗಿದ್ದಾರೆ.
ಪವಿತ್ರಾ ಗೌಡ ಮಂಗಳವಾರ ಜೈಲಿನಿಂದ ಹೊರಬಂದ ಕೂಡಲೇ ತಲಘಟ್ಟ ಪುರದ ವಜ್ರ ಮುನೇಶ್ವರ ದೇವಸ್ಥಾನಕ್ಕೆ ತಾಯಿ ಜೊತೆ ಭೇಟಿ ನೀಡಿದರು.
ಈ ವೇಳೆ ದರ್ಶನ್ ಹೆಸರಲ್ಲಿ ಪವಿತ್ರಾ ತಾಯಿ ಅರ್ಚನೆ ಮಾಡಿಸಿದ್ದು ವಿಶೇಷ.
6 ತಿಂಗಳ ಬಳಿಕ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆ ಮನೆ ದೇವರ ಸನ್ನಿಧಿಗೆ ಪವಿತ್ರಾ ಕುಟುಂಬ ಭೇಟಿ ನೀಡಿತು.
ಪೂಜೆ ಸಲ್ಲಿಸುವ ವೇಳೆ ಪವಿತ್ರಾ ತಾಯಿ ದರ್ಶನ್ ಹೆಸರಲ್ಲೂ ಅರ್ಚನೆ ಮಾಡಿಸಿದ್ದಾರೆ. ದೇವಾಲಯದಲ್ಲಿ ಪವಿತ್ರಾ ಗೌಡ ಕಣ್ಣೀರು ಹಾಕಿದರು.
ಜೈಲಧಿಕಾರಿಗಳ ಕೈಗೆ ಜಾಮೀನು ಪ್ರತಿ
ತಡವಾಗಿ ತಲುಪಿದ ಕಾರಣ ಶುಕ್ರವಾರವೆ ಬಿಡುಗಡೆಯಾಗಬೇಕಿದ್ದ ಪವಿತ್ರಾ ಗೌಡ ಜೈಲಿನಲ್ಲೇ ಇರಬೇಕಾಯಿತು.ಎಲ್ಲಾ ಪ್ರಕ್ರಿಯೆ ಮುಗಿದ ಹಿನ್ನೆಲೆಯಲ್ಲಿ ಇಂದು ಹೊರಬಂದರು.
ಮನೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಆರ್‌ಆರ್ ನಗರದ ನಿವಾಸಕ್ಕೆ ಪವಿತ್ರಾ ಕುಟುಂಬ ತೆರಳಿತು.